ಪ್ರಧಾನ ಸುದ್ದಿ

ಮತದಾನಕ್ಕೆ ಸಿದ್ಧತೆ, ಮೊಬೈಲ್ ಮೂಲಕ ಬರಲಿದೆ ಮಾಹಿತಿ

Srinivasamurthy VN

ಬೆಂಗಳೂರು: 3 ಬಿಬಿಎಂಪಿ ಮತದಾನಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದು, ಸಿಬ್ಬಂದಿ ಕೊರತೆಯಾಗದಂತೆಯೂ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ತಿಳಿಸಿದರು.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು ವಿವರಗಳನ್ನು ನೀಡಿದರು. ಈ ಬಾರಿ ಮತದಾನದಲ್ಲಿ ಯಾರನ್ನೂ ಆರಿಸದ `ನೋಟಾ' ಆಯ್ಕೆ ಕೈಬಿಡಲಾಗಿದೆ ಎನ್ನುವುದು ಸರಿಯಲ್ಲ. ಏಕೆಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೋಟಾ ಆಯ್ಕೆ ತರಲು ಕಾನೂನಿನಲ್ಲಿ
ತಿದ್ದುಪಡಿ ಮಾಡಬೇಕು. ಅಲ್ಲಿಯವರೆಗೆ, ಮತದಾರರು ಫಾರ್ಮ್ 27 ಪಡೆದು ಯಾರಿಗೂ ಮತ ನೀಡಲು ಇಷ್ಟವಿಲ್ಲ ಎಂದು ಬರೆದು ಕೊಡುವ ಆಯ್ಕೆ ಇದ್ದೇ ಇದೆ ಎಂದರು. ಮುಖ್ಯಮಂತ್ರಿಗಳಿಗೆ ಸಂಬಂಧಿಸಿದಂತೆ ನಿವೇಶನ ವಿಚಾರವಾಗಿ ದೂರು ಬಂದಿರುವ ಬಗ್ಗೆ ಕೇಳಿದ್ದೇನೆ. ಆದರೆ ಪ್ರಕರಣದ ವಿಚಾರವಾಗಿ ಯಾವುದೇ ಹೆಚ್ಚಿನ ಮಾಹಿತಿ
ಲಭ್ಯವಿಲ್ಲ ಎಂದು ಆಯುಕ್ತ ಶ್ರೀನಿವಾಸಾಚಾರಿ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಜಿ. ಕುಮಾರ್‍ನಾಯಕ್ ಮತದಾರರ ವಿವರಗಳನ್ನು ನೀಡಿ, ಮತದಾನದ ಅವಶ್ಯಕತೆ ಯನ್ನು ಒತ್ತಿ ಹೇಳಿದರು. ಚುನಾವಣೆ ಒತ್ತಡದಿಂದ ಪಾಲಿಕೆಯ ಸಾಮಾನ್ಯ ಸೇವೆಗಳಿಗೆ ತೊಂದರೆಯಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಅವರು, ಕೆಲವು ಕಡೆ ಬಿಬಿಎಂಪಿ ಕಚೇರಿಗೆ ಬೀಗ ಹಾಕಿರುವುದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಚಿತ್ರಗಳೂ ಹರಿದಾಡುತ್ತಿವೆ. ಚುಣಾವಣಾ ಕಾರ್ಯಕ್ಕೆ ಅಥಿಕಾರಿಗಳನ್ನು ನೇಮಿಸಿರುವು ದರಿಂದ ಸಾಮಾನ್ಯ ಸೇವೆಗಳನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಕಚೇರಿಗೆ ಬೀಗ ಹಾಕಿದ ವಿಚಾರ ತಿಳಿಸಿದ ನಂತರ ಕೂಡಲೇ ಕ್ರಮ ಕೈಗೊಳ್ಳಲಾಗಿದೆ ಎಂದರು. ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಹಾಜರಿದ್ದರು.

SCROLL FOR NEXT