ಬಿಬಿಎಂಪಿ ಚುನಾವಣೆ: ಅಪರಾಹ್ನ 4ರವರೆಗೆ ಶೇ.38 ರಷ್ಟು ಮತದಾನ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು,...
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಅಪರಾಹ್ನ 4 ಗಂಟೆಯವರೆಗೆ ರವರೆಗೆ ಶೇ.38ರಷ್ಟು ಮತದಾನವಾಗಿದೆ.
ಇಂದು ಅಪರಾಹ್ನ 4ರವರೆಗೆ ಲಭ್ಯವಾಗಿರುವ ಮತದಾನದ ಮಾಹಿತಿಯ ಪ್ರಕಾರ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 20.92ರಷ್ಟು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ 22.31ರಷ್ಟು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.20.37, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.30.60ರಷ್ಟು, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 29.19ರಷ್ಟು ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.27.58ರಷ್ಟು ಮತದಾನವಾಗಿದೆ. ಒಟ್ಟಾರೆ ಇದುವರೆಗೆ ಶೇ.25.17ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಯಲಹಂಕ ಉಪನಗರ ವಾರ್ಡ್ ಬಳಿ ಬಿಜೆಪಿ ಶಾಸಕ ವಿಶ್ವನಾಥ್ ಮತದಾರರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಹಾಗೂ ಕೆಲವು ಕಡೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ, ಬಿಬಿಎಂಪಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದ್ದು,
ಶಾಸಕರ ಪತ್ನಿ, ಪುತ್ರ, ಮಾಜಿ ಮೇಯರ್, ಹಾಗೂ ಮಾಜಿ ಸದಸ್ಯರೂ ಸ್ಪರ್ಧಿಸಿರುವ ಬಿಬಿಎಂಪಿಯ 197 ವಾರ್ಡ್‍ಗಳಿಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿರುವ 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೃಹತ್ ಬೆಂಗಳೂರಿನಲ್ಲಿ 73,88,256 ಮತದಾರರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷ ಹಾಗೂ ಪಕ್ಷೇತರರೂ ಸೇರಿದಂತೆ 1,121 ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ.
ಶೇ.60ರ ಮತದಾನದ ಗುರಿ
ಚುನಾವಣೆ ಮುಂದೂಡಿಕೆ ಸರ್ಕಸ್‍ಗಳ ನಡುವೆಯೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿವಿಧ ಹಂತದಲ್ಲಿ ಕಸರತ್ತು ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದಕ್ಕೆ ತಕ್ಕಂತೆ ರಾಜ್ಯ ಚುನಾವಣಾ ಆಯೋಗ ಕೂಡ ಮುಂದೂಡಿಕೆ ಗೊಂದಲದ ನಡುವೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಅಷ್ಟೇ ಅಲ್ಲ. ಪ್ರತಿ ಚುನಾವಣೆಯಲ್ಲೂ ಶೇ.46 ಮೀರದ ಮತದಾನ ಪ್ರಮಾಣವನ್ನು ಈ ಬಾರಿ ಹೇಗಾದರೂ ಮಾಡಿ ಶೇ. 60ಕ್ಕೆ ಮುಟ್ಟಿಸಲು ಸಕಲ ಪ್ರಯತ್ನ ನಡೆಸಿದೆ.