ಬಿಬಿಎಂಪಿ ಗೆಲುವು; ಬೆಂಗಳೂರಿಗೆ ಧನ್ಯವಾದ ಹೇಳಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಬಿಬಿಎಂಪಿ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದಕ್ಕೆ ಸಂತಸಗೊಂಡು, ಜನರು ಪಕ್ಷದ ಮೇಲೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಬಿಬಿಎಂಪಿ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದಕ್ಕೆ ಸಂತಸಗೊಂಡು, ಜನರು ಪಕ್ಷದ ಮೇಲೆ ನಂಬಿಕೆಯಿಟ್ಟಿರುವುದು ಸಂಭ್ರಮ ಮತ್ತು ವಿನೀತತೆಯನ್ನು ತಂದಿದೆ ಎಂದಿದ್ದಾರೆ.
"ಜನರು ಪಕ್ಷದ ಮೇಲೆ ನಂಬಿಕೆಯಿಟ್ಟಿರುವುದು ಸಂತಸದಾಯಕ ಹಾಗು ವಿನೀತನನ್ನಾಗಿಸಿದೆ" ಎಂದು ಮೋದಿ ಬಿಜೆಪಿ ಗೆಲುವಿನ ಸುದ್ದಿಗೆ ಟ್ವೀಟ್ ಮಾಡಿದ್ದಾರೆ.
"ನಾವು ೧೨೫ ಕೋಟಿ ಭಾರತೀಯರ ಆಶಯಗಳನ್ನು ಪೂರೈಸಲು ಬದ್ಧರಾಗಿದ್ದೇವೆ" ಎಂದು ಕೂಡ ತಿಳಿಸಿದ್ದಾರೆ.
ಮದ್ಯಪ್ರದೇಶ ಮತ್ತು ರಾಜಸ್ಥಾನದ ನಗರಸಭಾ ಚುನಾವಣೆಗಳ ನಂತರ ಈಗ ಬೆಂಗಳುರಿನಲ್ಲೂ ಗೆದ್ದಿರುವುದು ಬಿಜೆಪಿ ಪಕ್ಷಕ್ಕೆ ಹ್ಯಾಟ್ರಿಕ್ ದೊರೆತಿದೆ ಎಂದಿದ್ದಾರೆ.
"ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತದ ರಾಜಕೀಯಕ್ಕೆ ಸಿಕ್ಕ ಗೆಲುವು ಇದು"
"ಬೆಂಗಳೂರು ಧನ್ಯವಾದಗಳು! ಜನರಿಗೆ ನಾನು ಕೃತಜ್ಞ ಹಾಗೂ ಕರ್ನಾಟಕ ಬಿಜೆಪಿ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು" ಎಂದು ಕೂಡ ಹೇಳಿದ್ದಾರೆ.