ಪ್ರಧಾನ ಸುದ್ದಿ

ಸೋನಿಯಾ ಗಾಂಧಿ ವಿರುದ್ಧದ ೧೯೮೪ ಗಲಭೆ ಪ್ರಕರಣ ರದ್ದು ಮಾಡಿದ ಅಮೆರಿಕಾ ಕೋರ್ಟ್

Guruprasad Narayana

ನ್ಯೂಯಾರ್ಕ್: ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧದ ೧೯೮೪ ಸಿಖ್ ವಿರೋಧಿ ಗಲಭೆಯ ಪ್ರಕರಣವನ್ನು ರದ್ದು ಮಾಡಿ ಅಮೆರಿಕಾದ ಜಿಲ್ಲ ಕೋರ್ಟ್ ನೀಡಿದ್ದ ಆದೇಶವನ್ನು ನ್ಯೂಯಾರ್ಕ್ ನ ಕೋರ್ಟ್ ಆಫ್ ಅಪೀಲ್ಸ್ ಎತ್ತಿ ಹಿಡಿದಿದ್ದು, ಈ ವಿಷಯ ಆಡಳಿತ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದೆ.

ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಸ್ಥೆ ೨೦೧೩ ರಲ್ಲಿ, ಸಿಖ್ ಗಲಭೆಗಳಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕರನ್ನು ಸೋನಿಯಾ ಗಾಂಧಿ ರಕ್ಷಿಸುತ್ತಿದ್ದಾರೆ ಎಂದು ದೂರಿ ಪ್ರಕರಣ ದಾಖಲಿಸಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಗ್ಗೊಲೆಯ ನಂತರ ಈ ಸಿಖ್ ವಿರೋಧಿ ಗಲಭೆಗಳಲ್ಲಿ ಸಾವಿರಾರು ಸಿಖ್ ಸಮುದಾಯನ ಜನ ಮೃತರಾಗಿದ್ದರು.

ಅಮೇರಿಕಾ ಜಿಲ್ಲ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿರುವ ಮೂರು ನ್ಯಾಯಧೀಶರ ಪೀಠ, ಈ ವಿಷಯ ನಮ್ಮ ಆಡಳಿತ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಈ ಎಲ್ಲ ಕೃತ್ಯಗಳು ಅಮೆರಿಕಾದಲ್ಲಿ ನಡೆಯದೆ ಭಾರತದಲ್ಲಿ ಜರುಗಿವೆ ಎಂದು ತಿಳಿಸಿದ್ದಾರೆ.

ಸಿಖ್ಸ್ ಫಾರ್ ಜಸ್ಟೀಸ್ ಸಂಸ್ಥೆ ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಅರ್ಜಿ ಸಲ್ಲಿಸುವುದಾಗಿ ಹೇಳಿಕೊಂಡಿದೆ.

SCROLL FOR NEXT