ನವದೆಹಲಿ: ರಕ್ಷಾ ಬಂಧನ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶನಿವಾರ ಶುಭ ಕೋರಿದ್ದಾರೆ.
ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ "ರಾಕಿ ದಾರ ಸಹೋದರಿಯರು ಮತ್ತು ಸಹೋದರರನ್ನು ಪ್ರೀತಿ ಮತ್ತು ನಂಬಿಕೆಗಳಿಂದ ಬೆಸೆಯುತ್ತದೆ. ನಾವು ಭಾರತದಲ್ಲಿ ಮಹಿಳೆಯರ ಅದರಲ್ಲೂ ಹೆಣ್ಣು ಮಕ್ಕಳ ಉನ್ನತಿಗೆ ಪಣ ತೊಡೋಣ" ಎಂದು ತಿಳಿಸಿದ್ದಾರೆ.
"ರಕ್ಷಾ ಬಂಧನ ಈ ದಿನ ಭಾರತದ ನಾಗರಿಕರಿಗೆ ನನ್ನ ಶುಭಾಶಯಗಳು" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಈ ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಕಿ ಕಟ್ಟುವ ಮೂಲಕ, ಪರಸ್ಪರ ಪ್ರೇಮ, ನಂಬಿಕೆ ಮತ್ತು ಉನ್ನತಿಗಾಗಿ ಪ್ರಾರ್ಥಿಸುತ್ತಾರೆ.