ಸಂತ್ರಸ್ತರಿಗೆ ನೆರವು ನೀಡುತ್ತಿರುವ ಸ್ವಯಂ ಸೇವಾ ಕಾರ್ಯಕರ್ತರು 
ಪ್ರಧಾನ ಸುದ್ದಿ

ನೆರೆಯಲ್ಲಿ ಅರಳಿದ ಮಾನವೀಯತೆ

ಇಡೀ ತಮಿಳುನಾಡನ್ನೇ ನಡುಗಿಸಿದ ಮಳೆ ಒಂದೆಡೆ ಅಪಾರ ಪ್ರಮಾಣದ ಹಾನಿ ಮಾಡಿದ್ದರೆ, ಮತ್ತೊಂದೆಡೆ ಅದ್ಭುತ...

ಚೆನ್ನೈ: ಇಡೀ ತಮಿಳುನಾಡನ್ನೇ ನಡುಗಿಸಿದ ಮಳೆ ಒಂದೆಡೆ ಅಪಾರ ಪ್ರಮಾಣದ ಹಾನಿ ಮಾಡಿದ್ದರೆ, ಮತ್ತೊಂದೆಡೆ ಅದ್ಭುತ ಮಾನವೀಯತೆಯ ಮುಖವನ್ನೂ ಅನಾವರಣಗೊಳಿಸಿತು.
ಚೆನ್ನೈ ನಗರವನ್ನೇ ಮುಳುಗಿಸಿದ ಮಳೆ ನೀರು ಬದುಕನ್ನೂ ಮುಳುಗಿಸುತ್ತಿದೆ ಎನ್ನುವಾಗ ಜನತೆ ಪರಸ್ಪರ ನೆರವಾಗುತ್ತಿದ್ದಾರೆ. ಆದರೆ, ಯಾರು ಕೂಡ ನೀನು ತಮಿಳನೋ, ಕನ್ನಡಿಗನೋ, ತೆಲುಗನೋ, ಬಿಹಾರಿಯೋ ಎಂದು ಪ್ರಶ್ನಿಸುತ್ತಿಲ್ಲ. 
ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಎಂಬ ಮಾತುಗಳು ಅಲ್ಲಿ ಉದ್ಭವಿಸಿಲ್ಲ. ಬಡವ ಸಿರಿವಂತ, ಮೇಲು ಕೀಳು ಎಂಬ ಭಾವನೆ ಅಲ್ಲಿ ಸುಳಿಯುತ್ತಿಲ್ಲ. ಅಲ್ಲಿದ್ದ ಎಲ್ಲರ ಮನಸ್ಸು ಹೇಳುತ್ತಿದ್ದುದು ಒಂದೇ ನಾವೆಲ್ಲರೂ ಮನುಷ್ಯರು ಎಂದು. 
ಹೌದು. ತಮಿಳುನಾಡು ಕಂಡ ಭೀಕರ ದುರಂತವು ಪರೋಕ್ಷವಾಗಿ ಪ್ರೀತಿ, ಸಹಬಾಳ್ವೆ, ಭ್ರಾತೃತ್ವ, ಹೃದಯ ವೈಶಾಲ್ಯತೆಯ ಮೌಲ್ಯವನ್ನು ಮುಂದಿಟ್ಟಿತು. ಸಂಕಷ್ಟದ ಸಮಯದಲ್ಲಿ ಜಾತಿ, ಮತ, ಭೇದವನ್ನು ಮರೆತು ಒಂದಾದ ಜನ, ಪರಸ್ಪರ ಸಹಾಯಹಸ್ತ ಚಾಚುವ ಮೂಲಕ, ಎಂತಹ ಭೀಕರ ಪ್ರಾಕೃತಿಕ ವಿಕೋಪವನ್ನೂ ಮೆಟ್ಟಿ ನಿಲ್ಲುವ ಶಕ್ತಿ ಮಾನವೀಯತೆಗೆ ಇದೆ ಎಂಬುದನ್ನು ತೋರಿಸಿಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!