ಸಲ್ಮಾನ್ ಖಾನ್ 
ಪ್ರಧಾನ ಸುದ್ದಿ

ಸಲ್ಮಾನ್ ಅಪರಾಧ ಸಾಬೀತು ಮಾಡಲು ಕಾನೂನು ವಿಫಲ?

ಗುದ್ದೋಡು ಪ್ರಕರಣದ ಆರೋಪಿ ಬಾಲಿವುಡ್ ನಟ ಸಲ್ಮಾನ್‍ಖಾನ್ ಪಾಲಿಗೆ ಕೊಂಚ ನಿರಾಳ ಒದಗುವ ಸೂಚನೆ...

ಮುಂಬೈ: ಗುದ್ದೋಡು ಪ್ರಕರಣದ ಆರೋಪಿ ಬಾಲಿವುಡ್ ನಟ ಸಲ್ಮಾನ್‍ಖಾನ್ ಪಾಲಿಗೆ ಕೊಂಚ ನಿರಾಳ ಒದಗುವ ಸೂಚನೆ ಸಿಕ್ಕಿದೆ. 
ಸಲ್ಮಾನ್‍ಖಾನ್ ಮದ್ಯಪಾನ ಮಾಡಿದ್ದನ್ನು ಹಾಗೂ ಕುಡಿದು ವಾಹನ ಚಾಲನೆ ಮಾಡಿದ್ದನ್ನು ಸಾಬೀತು ಪಡಿಸಲು ಬೇಕಾಗಿರುವ ಬಲವಾದ ಸಾಕ್ಷಿಗಳು ಇಲ್ಲದಿರುವುದನ್ನು ವಿಚಾರಣೆಯ ಸಮಯದಲ್ಲಿ ಎಂದು ಮುಂಬೈ ಹೈಕೋರ್ಟ್ ಗಮನಿಸಿರುವುದರಿಂದ ಗುರುವಾರ ಹೊರಬರಲಿರುವ ತೀರ್ಪಿನ ಬಗ್ಗೆ ಕುತೂಹಲ ಹೆಚ್ಚಾಗಿದೆ. 
ಸತತ ಮೂರನೇ ದಿನಕ್ಕೆ ಕಾಲಿಟ್ಟ ಸಲ್ಮಾನ್ ಖಾನ್ ಮನವಿ ಅರ್ಜಿಯ ವಿಚಾರಣೆ ಗುರುವಾರ ಕೊನೆಗೊಳ್ಳಲಿದ್ದು, ಸಲ್ಮಾನ್ ಹಣೆಬರಹ ಸಂಜೆಯ ಹೊತ್ತಿಗೆ ನಿರ್ಧಾರವಾಗಲಿದೆ. 2002ರ ಈ ಪ್ರಕರಣದಲ್ಲಿ ಐದುವರ್ಷ ಜೈಲುಶಿಕ್ಷೆಯ ವಿರುದ್ಧ ಸಲ್ಮಾನ್ ಸಲ್ಲಿಸಿರುವ ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ಎ .ಆರ್ ಜೋಷಿ, ಪ್ರತ್ಯಕ್ಷ ಸಾಕ್ಷಿ ರವೀಂದ್ರ ಪಾಟೀಲ್ ರ ಹೇಳಿಕೆಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. 
ಮೂಲ ಎಫ್ ಐಆರ್‍ಗೂ ನಂತರದ ಹೇಳಿಕೆಗಳಿಗೂ ವ್ಯತ್ಯಾಸವಿದೆ ಎಂದಿದ್ದಾರೆ. ಏತನ್ಮಧ್ಯೆ ಅಂದು ಕಾರ್‍ನಲ್ಲಿದ್ದ ಗಾಯಕ ಕಮಾಲ್ ಖಾನ್ ರನ್ನೂ ಪರೀಕ್ಷೆಗೆ ಒಳಪಡಿಸಬೇಕಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT