ಪ್ರಧಾನ ಸುದ್ದಿ

ನಿರ್ಭಯಾ ಪ್ರಕರಣ: ಟೈಲರ್ ಆಗಿ ಹೊಸಜೀವನ ಆರಂಭಿಸಲಿದ್ದಾನೆ ಬಾಲಾಪರಾಧಿ

Shilpa D

 ಇಡಿ ದೇನವದೆಹಲಿ;ಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಮೂರು ವರ್ಷಗಳು ಕಳೆಯುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಯನ್ನು ಡಿಸೆಂಬರ್ 20 ರಂದು ಜೈಲಿನಿಂದ ಬಿಡುಗಡೆಗೊಳಿಸಲಾಗುತ್ತದೆ.

ಬಾಲಾಪರಾಧಿ ಬಿಡುಗಡೆಗೊಳಿಸುವ ಕ್ರಮಕ್ಕೆ ಕೇಂದ್ರ ಸರ್ಕಾರ,  ನಿರ್ಭಯಾ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬಾಲಾಪರಾಧಿಯನ್ನು ಬಿಡುಗಡೆಗೊಳಿಸದಂತೆ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ.

ಇದೆಲ್ಲದರ ನಡುವೆ 20 ವರ್ಷದ ಬಾಲಾಪರಾಧಿ, ಗರಿಷ್ಠ ಶಿಕ್ಷೆ ಅನುಭವಿಸಿದ್ದು, ಇನ್ನು ಹೆಚ್ಚಿನ ಶಿಕ್ಷೆಯ ಪ್ರಮಾಣಕ್ಕೆ ಬಾಲಾಪರಾಧ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.

ಬಾಲಾಪರಾಧಿಗೆ ಹೊಸ ಜೀವನ ಆರಂಭಿಸಲು ಮಹಿಳಾ ಮತ್ತು  ಮಕ್ಕಳ ಇಲಾಖೆ 10 ಸಾವಿರ ರೂಪಾಯಿ ಧನಸಹಾಯ ಹಾಗೂ ಒಂದು ಹೊಲಿಗೆ ಯಂತ್ರ ನೀಡಲಿದೆ. ಇದರಿಂದ ಆತ ಟೈಲರ್ ವೃತ್ತಿ ಆರಂಭಿಸಿ ಜೀವನ ನಡೆಸಲಿದ್ದಾನೆ.

ತೀರಾ ಬಡ ಕುಟುಂಬದ ಹಿನ್ನೆಲೆ ಹೊಂದಿರುವ ಬಾಲಾಪರಾಧಿ ತಂದೆ ಮಾನಸಿಕ ರೋಗಿ, ಮಗನ ಕೃತ್ಯದಿಂದ ನೊಂದ ತಾಯಿ ಇನ್ನೂ ಶಾಕ್ ನಿಂದ ಹೊರಬಂದಿಲ್ಲ. ಆತನ ಸಹೋದರರು ಇನ್ನೂ ಚಿಕ್ಕವರಿರುವ ಕಾರಣ ಸಂಸಾರದ ಜವಾಬ್ದಾರಿ ಬಾಲಾಪರಾಧಿಯ ಮೇಲಿದೆ. ಹೀಗಾಗಿ ಆತನ ಕುಟುಂಬಕ್ಕೆ ಸಹಾಯವಾಗಲಿ ಎಂದು ಆತನಿಗೆ ಹಣಕಾಸಿನ ನೆರವು ನೀಡಿ, ಜೀವನ ಕಲ್ಪಿಸಿಕೊಳ್ಳುವುದಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅವಕಾಶ ಮಾಡಿಕೊಡಲು ಮುಂದಾಗಿದೆ.

SCROLL FOR NEXT