ಬಿಎಸ್ ವೈ ಪ್ರಕರಣ: ತ್ವರಿತ ವಿಚಾರಣೆ ನಡೆಸಲು ಹೈಕೋರ್ಟ್ ಗೆ ಸುಪ್ರೀಂ ಆದೇಶ
ಮಾಜಿ ಮುಖ್ಯಮಂತ್ರಿ ಬಿಎಶ್ ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಗಳ ಸಂಬಂಧ ಲೋಕಾಯುಕ್ತ...
ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಶ್ ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಗಳ ಸಂಬಂಧ ಲೋಕಾಯುಕ್ತ ದಾಖಲಿಸಿರುವ ಮೂರು ಪ್ರಕರಣಗಳ ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ಗೆ ಸೂಚಿಸಿದೆ.
ಆದರೆ, ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಮಾಡಲು ಅದು ನಿರಾಕರಿಸಿದೆ. ನ್ಯಾ.ಚಲಮೇಶ್ವರ ಮತ್ತು ನ್ಯಾ.ಎ.ಎಂ ಸಪ್ರೆ ಅವರಿದ್ದ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್ ತ್ವರಿತವಾಗಿ ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕೆಂದು ಸೂಚಿಸಿತು.
ಒಂದು ವೇಳೆ ತ್ವರಿತವಾಗಿ ವಿಚಾರಣೆ ನಡೆಯದೇ ಇದ್ದರೆ ಲೋಕಾಯುಕ್ತ ಮತ್ತು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲು ಮುಕ್ತವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಡಿ.16ರಂದು ಈ ಪ್ರಕರಣಗಳ ವಿಚಾರಣೆ ಹೈಕೋರ್ಟ್ನಲ್ಲಿ ನಿಗದಿಯಾಗಿದೆ.