ಭಾರತದ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ 
ಪ್ರಧಾನ ಸುದ್ದಿ

ವಿಶ್ವಸಂಸ್ಥೆ ತೀರ್ಮಾನಿಸಿದರೆ ಐಸಿಸ್ ವಿರುದ್ಧ ಕಾರ್ಯಾಚರಣೆಗೆ ಭಾರತ ಸಿದ್ಧ: ಪರ್ರಿಕರ್

ವಿಶ್ವಸಂಸ್ಥೆ ಸಂಕಲ್ಪ ತಳೆದರೆ ವಿಶ್ವಸಂಸ್ಥೆಯ ಬಾವುಟದಡಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡಲು ಸಿದ್ಧ ಎಂದು ಭಾರತ ತಿಳಿಸಿದೆ.

ನವದೆಹಲಿ: ವಿಶ್ವಸಂಸ್ಥೆ ಸಂಕಲ್ಪ ತಳೆದರೆ ವಿಶ್ವಸಂಸ್ಥೆಯ ಬಾವುಟದಡಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡಲು ಸಿದ್ಧ ಎಂದು ಭಾರತ ತಿಳಿಸಿದೆ.

ಅಮೆರಿಕಾದ ರಕ್ಷಣಾ ಸಚಿವ ಆಶ್ಟನ್ ಕಾರ್ಟರ್ ಅವರ ಜೊತೆಗಿನ ವಾಶಿಂಗ್ಟನ್ ಭೇಟಿ ಮುಗಿಸಿ ಹಿಂದಿರುಗಿದ ಭಾರತದ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ "ಐಸಿಸ್ ವಿರುದ್ಧ ವಿಶ್ವ ಸಂಸ್ಥೆಯ ಸಂಕಲ್ಪ, ವಿಶ್ವ ಸಂಸ್ಥೆಯ ಬಾವುಟ, ವಿಶ್ವ ಸಂಸ್ಥೆಯ ಗುರಿ ಇದ್ದರೆ ಇದರ ಭಾಗವಾಗಲು ಭಾರತ ಸಿದ್ದ ಎಂದು ನಾವು ಸ್ಪಷ್ಟೀಕರಿಸಿದ್ದೇವೆ" ಎಂದು ವಿಜಯ್ ದಿವಸ್ ಆಚರಣೆಯ ವೇಳೆಯಲ್ಲಿ ಇಂಡಿಯಾ ಗೇಟ್ ಬಳಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಭಾರತೀಯ ಭದ್ರತಾ ವರದಿಗಳ ಪ್ರಕಾರ ಸುಮಾರು ೨೦ ಭಾರತೀಯ ಯುವಕರು ಸಿರಿಯಾ ಮತ್ತು ಇರಾಕ್ ನಲ್ಲಿ ಐಸಿಸ್ ಸೇರಿದ್ದಾರೆ ಎಂದು ತಿಳಿಯಲಾಗಿದೆ. ಅಲ್ಲದೆ ಹಲವಾರು ಯುವಕರು ಐಸಿಸ್ ಸೇರದಂತೆ ತಡೆಯಲು ಭಾರತೀತ ಭದ್ರತಾ ವ್ಯವಸ್ಥೆ ಯಶಸ್ವಿಯಾಗಿದೆ.

ಇಲ್ಲಿಯವರೆಗೂ ಸುಮಾರ್ ೧೭ ಯುವಕರನ್ನು, ಬಹುತೇಕರು ತೆಲಂಗಾಣದವರು, ಸಿರಿಯಾಗೆ ಹೋಗಿ ಇಸ್ಲಾಮಿಕ್ ಸ್ಟೇಟ್ ಸೇರುವ ಯೋಜನೆಯನ್ನು ವಿಫಲಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!