ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಅರುಣಾಚಲ ವಿವಾದದ ಬಗ್ಗೆ ಚರ್ಚಿಸಿದರು.
ನವದೆಹಲಿ: ಅರುಣಾಚಲ ವಿವಾದಕ್ಕೆ ಸಂಬಂಧಿಸಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿದೆ.
ಅರುಣಾಚಲ ದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‍ನ ಕೆಲವು ಬಂಡಾಯ ಶಾಸಕರೊಂದಿಗೆ ಸೇರಿ ಬಿಜೆಪಿಯು ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ.
ಇದೊಂದು ಪೂರ್ವಯೋಜಿತ ಕೃತ್ಯ ಎಂದು ನಿಯೋಗ ಆರೋಪಿಸಿದೆ. ಈ ವಿಚಾರದಲ್ಲಿ ರಾಷ್ಟ್ರಪತಿ ಸೂಕ್ತ ನಿರ್ದೇಶನ/ ಸಲಹೆ ಒದಗಿಸಬೇಕು ಎಂದೂ ಕಾಂಗ್ರೆಸ್ ಕೋರಿದೆ. ಅರುಣಾಚಲದಲ್ಲಿ ಜ.14ರಿಂದ ಅಸೆಂಬ್ಲಿ ಸೆಷನ್ ನಡೆಯಬೇಕಿತ್ತು.
ಆದರೆ, ಸಿಎಂ, ಸಂಪುಟ ಮತ್ತು ಸ್ಪೀಕರ್‍ಗೆ ಯಾವುದೇ ಮಾಹಿತಿ ನೀಡದೇ ರಾಜ್ಯಪಾಲರು ಅಧಿವೇಶನವನ್ನು ನ.3ಕ್ಕೆ ಮುಂದೂಡಿದ್ದಾರೆ. ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಕಾಂಗ್ರೆಸ್ ಆರೋಪ. ಇದೇ ವಿಚಾರಕ್ಕೆ ಸಂಬಂಧಿಸಿ ಬುಧವಾರ, ಸಂಸತ್‍ನ ಎರಡೂ ಸದನಗಳಲ್ಲಿ ಭಾರಿ ಗದ್ದಲ ನಡೆಯಿತು.
ಏತನ್ಮಧ್ಯೆ, ಅರುಣಾಚಲದಲ್ಲಿ ಹೊಸ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಕಾಂಗ್ರೆಸ್ 21 ಬಂಡಾಯ ಶಾಸಕರು, ಬಿಜೆಪಿಯ 11, ಇಬ್ಬರು ಪಕ್ಷೇತರ ಶಾಸಕರೊಂದಿಗೆ ಸೇರಿ, ಸ್ಪೀಕರ್ ವಿರುದ್ಧ ಮಹಾಭಿಯೋಗಕ್ಕೆ ಸಿದ್ಧರಾದ ಬೆಳವಣಿಗೆ ನಡೆಯಿತು. ಇದನ್ನು ಸ್ಪೀಕರ್ ಬಾಮï ರೆಬಿಯಾ, ಅಸಾಂವಿಧಾನಿಕ ಎಂದು ಬಣ್ಣಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics