ಜಖ್ವ: ಗುಜರಾತಿನ ತೀರದಿಂದ ಮುಂದುವರೆದ ಅಂತರಾಷ್ಟ್ರೀಯ ಸಮುದ್ರ ಗಡಿಯಲ್ಲಿ ಪಾಕಿಸ್ತಾನದ ನೌಕಾ ಭದ್ರತಾ ಏಜೆನ್ಸಿ ೭೦ ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ೧೧ ದೋಣಿಗಳನ್ನು ವಶಪಡಿಸಿಕೊಂಡಿದೆ.
೧೨ ದೋಣಿಗಳಲ್ಲಿ ಮೀನುಗಾರರು ಮೀನು ಹಿಡಿಯುತ್ತಿದ್ದರು ಆದರೆ ಪಾಕಿಸ್ತಾನದ ಭದ್ರತಾ ಏಜೆನ್ಸಿ ಗುಂಡು ಹಾರಿಸಿದ್ದರಿಂದ ಒಂದು ದೋಣಿಗೆ ಬೆಂಕಿ ಹತ್ತಿಕೊಂಡು ಮುಳುಗಿತು ಎಂದು ರಾಷ್ಟ್ರೀಯ ಮೀನು ಕಾರ್ಯಕರ್ತ ಸಂಘದ ಕಾರ್ಯದರ್ಶಿ ಮನೀಶ್ ಲೋಧಾರಿ ಹೇಳಿದ್ದಾರೆ.
ಆದರೆ ಈ ಘಟನೆಯಿಂದ ಯಾವುದೇ ಸಾವಿನ ವರದಿಯಾಗಿಲ್ಲ. ಉಳಿದ ೧೧ ದೋಣಿಗಳನ್ನು ಪಾಕಿಸ್ತಾನದ ಭದ್ರತಾ ಏಜೆನ್ಸಿ ಕರಾಚಿ ಬಂದರಿಗೆ ತೆಗೆದೊಯ್ದು ವಶಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ಅಹಮದಾಬಾದ್ ಸಮುದ್ರ ತೀರದ ಗಾರ್ಡ್ ಗೆ ತಿಳಿಸಲಾಗಿದೆ ಎಂದು ಕೂಡ ಲೋಧಾರಿ ಹೇಳಿದ್ದಾರೆ.