ಪ್ರಧಾನ ಸುದ್ದಿ

ಬಾಲ ನ್ಯಾಯ ತಿದ್ದುಪಡಿ ಕಾಯ್ದೆ ಅಂಗೀಕಾರ ತೃಪ್ತಿ ತಂದಿದೆ, ಆದರೆ ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ: ನಿರ್ಭಯಾ ತಾಯಿ

Lingaraj Badiger
ನವದೆಹಲಿ: ಬಾಲಪರಾಧ ನ್ಯಾಯ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ ದೊರೆತದ್ದು ಸಮಾಧಾನ ತಂದಿದೆ. ಆದರೆ ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ ಎಂದು ನಿರ್ಭಯಾ ತಾಯಿ ಆಶಾದೇವಿ ಅವರು ಮಂಗಳವಾರ ಹೇಳಿದ್ದಾರೆ.
ಬಾಲ ನ್ಯಾಯ ತಿದ್ದುಪಡಿ ಕಾಯ್ದೆ ಅಂಗೀಕಾರದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಆಶಾದೇವಿ, ವಿಧೇಯಕ ಅಂಗೀಕರಿಸಿದ್ದರಿಂದ ಖುಷಿಯಾಗಿದೆ. ಇದರಿಂದ ನನ್ನ ಮಗಳಿಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ. ಬೆರೆ ಹೆಣ್ಣು ಮಕ್ಕಳಿಗೆ ನ್ಯಾಯ ದೊರೆಯಲಿದೆ ಎಂದರು. ಅಲ್ಲದೆ ವಿಧೇಯ ಅಂಗೀಕಾರಕ್ಕೆ ಸಹಕರಿಸಿದ ಎಲ್ಲ ಪಕ್ಷದವರಿಗೂ ಧನ್ಯವಾದ ಎಂದರು.
ಸುದೀರ್ಘ ಚರ್ಚೆ ಬಳಿಕ ತಿದ್ದುಪಡಿ ಇಂದು ರಾಜ್ಯಸಭೆಯಲ್ಲಿ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಬಳಿಕ ಧ್ವನಿಮತದ ಮೂಲಕ ಅಂಗೀಕರಿಸಲಾತು. ಈ ವೇಳೆ  ಕಲಾಪದಲ್ಲಿ ನಿರ್ಭಯಾ ಪೋಷಕರು ಸಹ ಉಪಸ್ಥಿತರಿದ್ದರು.
SCROLL FOR NEXT