ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಬರ್ತಡೇ ಬಾಯ್' ನವಾಜ್ ಷರೀಫ್ ಗೆ ಸಪ್ರೈಸ್ ಕೊಡಲು ಪಾಕ್ ಗೆ ಮೋದಿ ದಿಢೀರ್ ಭೇಟಿ

ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಹತ್ತರ ಬದಲಾವಣೆ ಎಂಬಂತೆ ಕಾಬೂಲ್ ನಿಂದ ಲಾಹೋರ್ ಗೆ ತೆರಳಿ...

ನರೇಂದ್ರ ಮೋದಿ - ನವಾಜ್ ಷರೀಫ್
Lingaraj Badiger
Updated On : 25 Dec 2015, 5:02 am
ಕಾಬೂಲ್: ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಹತ್ತರ ಬದಲಾವಣೆ ಎಂಬಂತೆ ಕಾಬೂಲ್ ನಿಂದ ಲಾಹೋರ್ ಗೆ ತೆರಳಿ, ಇಂದು 66ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ, ಶುಭಾಶಯ ಕೋರುವುದಾಗಿ ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಸಂಬಂಧ ಈಗಾಗಲೇ ದೂರವಾಣಿ ಮೂಲಕ ಷರೀಫ್ ಅವರಿಗೆ ಶುಭ ಕೋರಿರುವ ಮೋದಿ, ಕಾಬೂಲ್ ನಿಂದ ದೆಹಲಿಗೆ ತೆರಳುವ ಸಂದರ್ಭದಲ್ಲಿ ಮಾರ್ಗ ಮಧ್ಯ ಪಾಕ್ ಪ್ರಧಾನಿಯನ್ನು ಭೇಟಿ ಮಾಡುವದಾಗಿ ಟ್ವೀಟ್ ಮಾಡಿದ್ದಾರೆ. ಷರೀಫ್ ಅವರು ಲಾಹೋರ್ ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ ಕಾಬೂಲ್ ನಲ್ಲಿ ಭಾರತ ಸರ್ಕಾರದಿಂದ ನಿರ್ಮಾಣಗೊಂಡಿದ್ದ ನೂತನ ಪಾರ್ಲಿಮೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆ ಕುರಿತಂತೆ ಪಾಕ್ ವಿರುದ್ಧ ವಾಗ್ದಾಳಿ ಕೂಡಾ ನಡೆಸಿದ್ದರು.

Advertisement

Advertisement

ಇನ್ನು ಪ್ರಧಾನಿ ಪಾಕಿಸ್ತಾನ ಭೇಟಿಯನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಕಟುವಾಗಿ ಟೀಕಿಸಿದ್ದು,  ಫೋಟೋಗೆ ಪೋಸ್ ಕೊಡಲು ಪ್ರಧಾನಿ ಮೋದಿ ಪಾಕ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement