ಪ್ರಧಾನ ಸುದ್ದಿ

ಪಾಕಿಸ್ತಾನದಲ್ಲಿ ಮೋದಿ-ಶರೀಫ್ ಭೇಟಿ ಸ್ವಾಗತಿಸಿದ ಚೈನಾ

ಶುಕ್ರವಾರ ನಡೆದ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ಭೇಟಿಯನ್ನು ಸ್ವಾಗತಿಸುರುವ ಚೈನಾ ಇದು ದಕ್ಷಿಣ ಏಶಿಯಾದ

ಬೀಜಿಂಗ್: ಶುಕ್ರವಾರ ನಡೆದ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ಭೇಟಿಯನ್ನು ಸ್ವಾಗತಿಸುರುವ ಚೈನಾ ಇದು ದಕ್ಷಿಣ  ಏಶಿಯಾದ ಶಾಂತಿ ಸೌಹಾರ್ದತೆಗೆ ಅವಶ್ಯಕ ಎಂದಿದೆ.

"ಪಾಕಿಸ್ತಾನ-ಭಾರತದ ನಡುವಿನ ಸಂಬಧದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳನ್ನು ಚೈನಾ ಸ್ವಾಗತಿಸುತ್ತದೆ" ಎಂದು ವಿದೇಶಾಂಗ ಸಚಿವ ಲು ಕಾಂಗ್ ಹೇಳಿದ್ದಾರೆ.

ಶುಕ್ರವಾರ ಅಪ್ಘಾನಿಸ್ಥಾನದಿಂದ ನವದೆಹಲಿಗೆ ಹಿಂದಿರುಗುವಾಗ ಮೋದಿ ಅವರು ಕರಾಚಿಯಲ್ಲಿ ಅನಿರೀಕ್ಷಿತವಾಗಿ ಇಳಿದು ಶರೀಫ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದರು.

ಇದು ಪಾಕಿಸ್ತಾನಕ್ಕೆ ಮೋದಿ ಅವರ ಮೊದಲ ಭೇಟಿಯಾದರೆ, ದಶಕದ ನಂತರ ಪಾಕಿಸ್ತಾನಕ್ಕೆ ಭೇಟಿ ಇತ್ತ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾದರು.

ದಕ್ಷಿಣ ಏಶಿಯಾದಲ್ಲಿ ಪಾಕಿಸ್ತಾನ ಮಟ್ಟು ಭಾರತ ಪ್ರಮುಖ ದೇಶಗಳು ಹಾಗೂ ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಈ ದೇಶಗಳ ಸಂಬಧದಲ್ಲಿ ಅಭಿವೃದ್ಧಿ ಅತಿ ಮುಖ್ಯ ಎಂದು ಲು ಹೇಳಿದ್ದಾರೆ.

"ನಮ್ಮ ನೆರೆಯ ರಾಷ್ಟ್ರಗಳಾದ ಹಾಗು ಮಿತ್ರ ದೇಶಗಳಾದ ಪಾಕಿಸ್ತಾನ ಮತ್ತು ಭಾರತದ ನಡುವಿನ ಉತ್ತಮ ಬಾಂಧವ್ಯಕ್ಕೆ ಚೈನಾ ಸದಾ ಸಹಕರಿಸುತ್ತದೆ" ಎಂದು ಚೈನಾ ಸರ್ಕಾರದ ವಕ್ತಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!