ಪ್ರಧಾನ ಸುದ್ದಿ

10 ಲಕ್ಷ ಆದಾಯವಿದ್ರೆ ಎಲ್ಪಿಜಿ ಸಬ್ಸಿಡಿ ಇಲ್ಲ: ಕೇಂದ್ರ ಸರ್ಕಾರದಿಂದ ಮಹತ್ವ ನಿರ್ಧಾರ

Lingaraj Badiger
ನವದೆಹಲಿ: ಹೊಸ ವರ್ಷಕ್ಕೆ ಹೊಸ ಶಾಕ್ ನೀಡಿರುವ ಕೇಂದ್ರ ಸರ್ಕಾರ, 10 ಲಕ್ಷ ರುಪಾಯಿಗಿಂತ ಹೆಚ್ಚು ಆದಾಯವಿರುವವರಿಗೆ ಎಲ್ಪಿಜಿ ಸಬ್ಸಿಡಿ ಕಡಿತಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
2016ರ ಜನವರಿ 1ರಿಂದ ಸರ್ಕಾರದ ಈ ಹೊಸ ಸಬ್ಸಿಡಿ ನಿಯಮ ಜಾರಿಗೆ ಬರಲಿದ್ದು, ವಾರ್ಷಿಕ 10 ಲಕ್ಷ ರುಪಾಯಿಗಿಂತ ಹೆಚು ಆದಾಯ ಹೊಂದಿರುವ ಕುಟುಂಬದ ಸಬ್ಸಿಡಿ ಕಡಿತಗೊಳ್ಳಲಿದೆ.
ಗ್ರಾಹಕರು ಈಗ ಸಬ್ಸಿಡಿ ದರಲ್ಲಿ ವರ್ಷಕ್ಕೆ 12 ಸಿಲಿಂಡರ್ಗಳನ್ನು ಪಡೆಯುತ್ತಿದ್ದು, ಅದಕ್ಕೂ ಹೆಚ್ಚು ಸಿಲಿಂಡರ್ ಬೇಕಾದಲ್ಲಿ ಸಂಪೂರ್ಣ ಹಣ ನೀಡಬೇಕಾಗಿತ್ತು. 
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಿಂದಾಗಿ ಸಬ್ಸಿಡಿ ಸಿಲಿಂಡರ್ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಆದರೂ ಗ್ರಾಹಕರಿಗೆ ನೀಡುತ್ತಿದ್ದು ಅಲ್ಪ ಸ್ವಲ್ಪ ಸಬ್ಸಿಡಿಯನ್ನು ಸರ್ಕಾರದ ಇದೀಗ ಕಿತ್ತುಕೊಂಡಿದ್ದು, ಮುಂದೊಂದು ದಿನ ಎಲ್ಲಾ ಗ್ರಾಹಕರಿಗೂ ಸಬ್ಸಿಡಿ ಕಡಿತಗೊಳಿಸಿದರೂ ಅಚ್ಚರಿಪಡಬೇಕಿಲ್ಲ.
SCROLL FOR NEXT