ಬಿ.ಎಸ್ ಯಡ್ಯೂರಪ್ಪ 
ಪ್ರಧಾನ ಸುದ್ದಿ

ಮಠಗಳು ರಾಜಕೀಯ ಮಾಡಬಾರದು: ಮಾಜಿ ಸಿಎಂ ಯಡಿಯೂರಪ್ಪ

ಮಠ- ಮಾನ್ಯಗಳು ಪೂರ್ಣದೃಷ್ಟಿಯಿಂದ ಸಾತ್ವಿಕತೆಗೆ ಬದ್ಧವಾಗಿರಬೇಕೆ ವಿನಃ ರಾಜಕೀಯ ಪ್ರೇರಿತ ವಿಚಾರಗಳಿಗೆ ವೇದಿಕೆ ಒದಗಿಸಬಾರದು ಎಂದು ಮಾಜಿ ....

ಬೆಂಗಳೂರು: ಮಠ- ಮಾನ್ಯಗಳು ಪೂರ್ಣದೃಷ್ಟಿಯಿಂದ ಸಾತ್ವಿಕತೆಗೆ ಬದ್ಧವಾಗಿರಬೇಕೆ ವಿನಃ ರಾಜಕೀಯ ಪ್ರೇರಿತ ವಿಚಾರಗಳಿಗೆ ವೇದಿಕೆ ಒದಗಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ನಿಡುಮಾಮಿಡಿ ಮಠವು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಮಾನವ ಧರ್ಮ ಪೀಠದ ಬೆಳ್ಳಿಹಬ್ಬದ ಮೂರನೇ ದಿನದ ಕಾರ್ಯಕ್ರಮದಲ್ಲಿ ಡಾ.ಎಂ. ನಾಗರಾಜ್ ಅವರ `ನಿಡುಮಾಮಿಡಿ ಕ್ಷೇತ್ರದ ಸಂಕ್ಷಿಪ್ತ ಚರಿತ್ರೆ', ನಿಡುಮಾಮಿಡಿ ಸ್ವಾಮೀಜಿ ರಚಿಸಿದ `ನೂತನ ಚೇತನ ಭಾಗ-2', ಡಾ.ಎಚ್.ಎಂ. ಎಸ್. ಪ್ರಕಾಶ್‍ರ `ಪ್ಲಾಯ್ಸ್ ಆಫ್ ಪೋಂಟಿಪ್ಸ್' ರಮೇಶ್ ಸಂಕ್ರಾಂತಿ ಅವರ `ನಿಡುಮಾಮಿಡಿ ನುಡಿಲುಮೆ' ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಶತಮಾನಗಳ ಇತಿಹಾಸ ಹೊಂದಿರುವ ನಿಡುಮಾಮಿಡಿ ಮಠವು ಪ್ರಗತಿಪರ ವಿಚಾರಗಳಿಗೆ ಪ್ರೊತ್ಸಾಹ ನೀಡುತ್ತಿದೆ. ಎಲ್ಲಾ ಮಠಗಳು ಸಹ ರಾಜಕೀಯಕ್ಕೆ ಆಸ್ಪದ ನೀಡದೆ ಮಠದ ತತ್ವಕ್ಕಾಗಿ ಕೆಲಸ ಮಾಡುವಂತಾಗಬೇಕು. ಆಗ ಮಠಗಳು ಉದ್ಧಾರವಾಗುತ್ತವೆ, ನಾಡು ಸಮೃದ್ಧಿಯಾಗುತ್ತದೆ. ಇಂದು ಇಡೀ ಭಾರತವನ್ನು ಜಗತ್ತು ನೋಡುತ್ತಿದ್ದು ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಕಾರಣಕರ್ತರಾಗಬೇಕು. ಮನುಷ್ಯನನ್ನು ಜಾತಿಯಿಂದ ನೋಡದೆ ಸ್ವಭಾವ, ಗುಣಗಳಿಂದ ನೋಡುವಂತಾಗಬೇಕು ಎಂದರು. ಭಾರತೀಯ ಸಮಾಜ ಭೌತಿಕ ಶ್ರೀಮಂತಿಕೆಯ ಮೇಲೆ ನಿಂತಿಲ್ಲ. ಆಧ್ಯಾತ್ಮಿಕ ಶ್ರೀಮಂತಿಕೆ ನೆಲೆಯ ಮೇಲೆ ನಿಂತಿರುವುದಕ್ಕೆ ನಾಡಿನ ಮಠ ಮಂದಿರಗಳೇ ಕಾರಣ. ಸಮಾಜವನ್ನು ಛಿದ್ರಗೊಳಿಸುವ ಕೆಲಸ ಯಾವುದೇ ಮಠಗಳಿಂದ ಆಗಬಾರದು.

ಒಟ್ಟು ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಎಲ್ಲ ಜಾತಿ ಜನಾಂಗದ ಜನರನ್ನು ಮುಖ್ಯ ವಾಹಿನಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಮಠಾದೀಶರ ಮೇಲಿದೆ. ಈ ನಿಟ್ಟಿನಲ್ಲಿ ನಿಡಿಮಾಮಿಡಿ ಮಠ ನಾಡಿನಲ್ಲಿ ಒಂದು ಆದರ್ಶಪ್ರಾಯ ಮಠವಾಗಿದೆ ಎಂದರು. ಇದೇ ವೇಳೆ ಮಠದ ಹಿರಿಯ ಭಕ್ತರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ