ಭಾವುಕರಾದ ಕಿರಣ್ ಬೇಡಿ 
ಪ್ರಧಾನ ಸುದ್ದಿ

ಜನರ ಪ್ರೀತಿ ನೋಡಿ ಭಾವುಕರಾದ ಕಿರಣ್ ಬೇಡಿ

ಗಟ್ಟಿಗಿತ್ತಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬುಧವಾರ ಪ್ರಚಾರವೇಳೆ ಅಭಿಮಾನಿಗಳ ಪ್ರೀತಿ ಗೌರವ ನೋಡಿ ಕಣ್ಣೀರಿಟ್ಟಿದ್ದಾರೆ. ದೆಹಲಿಯ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣಾ...

ನವದೆಹಲಿ: ಗಟ್ಟಿಗಿತ್ತಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬುಧವಾರ ಪ್ರಚಾರವೇಳೆ ಅಭಿಮಾನಿಗಳ ಪ್ರೀತಿ ಗೌರವ ನೋಡಿ ಕಣ್ಣೀರಿಟ್ಟಿದ್ದಾರೆ.

ದೆಹಲಿಯ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಬೇಡಿ, ಇಂದು ರೋಡ್ ಶೋ ನಡೆಸುತ್ತಿದ್ದ ವೇಳೆ ಭಾವುಕರಾಗಿದ್ದಾರೆ.

ರೋಡ್ ಶೋ ವೇಳೆ ಜನರ ಪ್ರೀತಿ, ಗೌರವಗಳನ್ನು ನೋಡಿ ಕಣ್ಣೀರಿಟ್ಟ ಬೇಡಿ, ನಾನು ಚುನಾವಣೆಯಲ್ಲಿ ಗೆದ್ದು ಜನರ ಪ್ರೀತಿ ಸಂದಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜನರ ಪ್ರೀತಿಯನ್ನು ನೋಡಿ ನನಗೇನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಈ ಖುಷಿಯನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ. ಅವರ ಪ್ರೀತಿಗೆ ಪ್ರತಿಯಾಗಿ ನಾನು ಪ್ರಾಮಾಣಿಕತೆಯಿಂದ ಅವರಿಗಾಗಿ ದುಡಿಯಲು ಬಯಸುತ್ತೇನೆ ಎಂದು ಭಾವುಕರಾಗಿ ಬೇಡಿ ಮಾತನಾಡಿದ್ದಾರೆ.

ಹೆದರಿಕೆಯಿಂದ ಕಣ್ಣೀರಿಟ್ಟಿದ್ದಾರೆ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕಿರಣ್ ಬೇಡಿ, ದೆಹಲಿಯಲ್ಲಿ ಸೋಲುತ್ತೇನೆ ಎಂಬ ಭಯದಿಂದಲೇ ಕಣ್ಣೀರು ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video