ಯವತ್ಮಲ್: ಸಾಲಬಾಧೆ ತಾಳಲಾರದೆ ಉರಿಯುತ್ತಿರುವ ಚಿತೆಯ ಮೇಲೆ ಹತ್ತಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ವಿದರ್ಭದಲ್ಲಿ ನಡೆದಿದೆ ಎಂದು ಗುರುವಾರ ಹೋರಾಟಗಾರರೊಬ್ಬರು ತಿಳಿಸಿದ್ದಾರೆ.
ಆನಂದರಾವ್ ಎಸ ಪಂಡಗ್ಲೆ (೪೫) ತಮ್ಮ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಎಂದು ವಿದರ್ಭ ಜನ ಆಂದೋಲನ ಸಮಿತಿ ಅಧ್ಯಕ್ಷ ಕಿಶೋರ್ ತಿವಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತ ತನ್ನ ಜಮೀನಿನ ಮೇಲೆ ೫೦ ಸಾವಿರ ಸಾಲ ಪಡೆದಿದ್ದ ಹಾಗೂ ತನ್ನ ದೊಡ್ಡ ಮಗಳ ಮದುವೆಗೆ ಮತ್ತೆ ೧೨ ಸಾವಿರ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
ವಿದರ್ಭ ಪ್ರದೇಶದಿಂದಲೇ ಬಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರೈತರ ಕಷ್ಟಗಳನ್ನು ಪರಿಹರಿಸಲು ಸಂಪೂರ್ಣವಾಗಿ ಸೋತಿದ್ದಾರೆ ಎಂದು ಶಿವಸೇನೆ ಕೆಲವು ದಿನಗಳ ಹಿಂದೆಯಷ್ಟೇ ಆರೋಪ ಮಾಡಿತ್ತು.