ಜಿತನ್‌ರಾಂ ಮಾಂಝಿ 
ಪ್ರಧಾನ ಸುದ್ದಿ

ಬಿಹಾರದ ಬಿಕ್ಕಟ್ಟು: ಗವರ್ನರ್ ಭೇಟಿ ಮಾಡಿದ ಜೆಡಿ(ಯು) ಶಾಸಕರು

ನಾಟಕೀಯ ಬೆಳವಣಿಗೆಯಲ್ಲಿ ಬಂಡಾಯ ಸಾರಿದ್ದ ಬಿಹಾರ ಸಿಎಂ ಜಿತನ್‌ರಾಂ ಮಾಂಝಿ ಅವರನ್ನು ವಜಾಗೊಳಿಸಿರುವ...

ಪಾಟ್ನಾ: ನಾಟಕೀಯ ಬೆಳವಣಿಗೆಯಲ್ಲಿ ಬಂಡಾಯ ಸಾರಿದ್ದ ಬಿಹಾರ ಸಿಎಂ  ಜಿತನ್‌ರಾಂ ಮಾಂಝಿ ಅವರನ್ನು ವಜಾಗೊಳಿಸಿರುವ ಜೆಡಿಯು ಶಾಸಕಾಂಗ ಸಭೆ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ನಾಯಕನನ್ನಾಗಿ ಶನಿವಾರ ಆಯ್ಕೆ ಮಾಡಿತ್ತು.

ಇದೀಗ ತಮ್ಮ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಲು ಬಿಜೆಪಿಯೇ ಕಾರಣ ಎಂದು ಜೆಡಿಯು ದೂರಿದ್ದು, ಗರ್ವನರ್ ಅಥವಾ ರಾಷ್ಟ್ರಪತಿಯನ್ನು ಭೇಟಿ ಮಾಡುವ ಮುನ್ನ ತಾವು 130 ಶಾಸಕರನ್ನು ಕರೆತಂದು ಬಹುಮತ ಸಾಬೀತುಪಡಿಸುವುದಾಗಿ ಹೇಳಿದೆ.

ಬಿಹಾರ ಮುಖ್ಯಮಂತ್ರಿಯಾಗಿದ್ದ ಜಿತನ್ ರಾಂ ಮಾಂಝು ಅವರು ಬಿಜೆಪಿ ಪರ ಕೆಲಸ ಮಾಡುತ್ತಿದ್ದು, ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಹಕ್ಕು ಇಲ್ಲ ಎಂದು ಜೆಡಿಯು ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ.

ಭಾನುವಾರ ಜೆಡಿಯು ಶಾಸಕರು ಗವರ್ನರ್ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ರಚಿಸುತ್ತಿರುವ ಪ್ರಸ್ತಾಪದ ಬಗ್ಗೆ ಹೇಳಿದ್ದಾರೆ. ಆ ಭೇಟಿಯಲ್ಲಿ ಕಾಂಗ್ರೆಸ್, ಆರ್‌ಜೆಡಿ ನೇತಾರರು ಸೇರಿದಂತೆ ಸ್ವತಂತ್ರ ಅಭ್ಯರ್ಥಿಗಳು ಭಾಗಿಯಾಗಿದ್ದರು.

ಆದಾಗ್ಯೂ ಉಚ್ಛಾಟಿತ ಮುಖ್ಯಮಂತ್ರಿ ಮಾಂಝಿ ಅವರು ಇಂದು ಸಂಜೆ 5 ಗಂಟೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿಯಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು