ಪ್ರಧಾನ ಸುದ್ದಿ

ಕಪ್ಪು ಹಣ: ೬೦ ಜನರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ

Guruprasad Narayana

ನವದೆಹಲಿ: ಜಿನಿವಾದ ಎಚ್ ಎಸ್ ಬಿ ಸಿ ಬ್ಯಾಂಕಿನಲ್ಲಿ ಕಪ್ಪು ಹಣ ಇಟ್ಟಿದ್ದಾರೆಂದು ವರದಿಯಾಗಿರುವ ೬೦ ಜನರ ಹೆಸರನ್ನು ಇಂದು ಸರ್ಕಾರ ಬಹಿರಂಗಪಡಿಸುವ ಸಾಧ್ಯತೆ ಇದೆ.

ಬಲ್ಲ ಮೂಲಗಳ ಪ್ರಕಾರ ಸರ್ಕಾರ ಬಹಿರಂಗಪಡಿಸಲಿರುವ ಜನರಲ್ಲಿ ಹೆಚ್ಚಿನ ಜನ ಬೃಹತ್ ಉದ್ಯಮಿಗಳು ಎನ್ನಲಾಗಿದೆ. ಕಪ್ಪು ಹಣದ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾದಳದ ನೇತೃತ್ವದಲ್ಲಿ ತೆರಿಗೆ ಇಲಾಖೆ ಈ ಉದ್ಯಮಿಗಳು ಮತ್ತು ಹಲವು ಸಂಸ್ಥೆಗಳ ಮೇಲೆ ಕೇಸು ದಾಖಲಿಸಲಾಗಿದೆ ಎನ್ನಲಾಗಿದೆ.

ಈ ಅನಧಿಕೃತ ಬ್ಯಾಂಕ್ ಖಾತೆಗಳಲ್ಲಿ ಸುಮಾರು ೧೫೦೦-೧೬೦೦ ಕೋಟಿ ರೂ ಇಡಲಾಗಿದೆ ಎನ್ನಲಾಗಿದೆ.

ವಿಶೇಷ ತನಿಖಾ ದಳವನ್ನು ಮುನ್ನಡೆಸುತ್ತಿರುವ ಮಾಜಿ ಸುಪ್ರೀಮ್ ಕೋರ್ಟ್ ನ್ಯಾಯಾಧೀಶ  ಎಂ ಬಿ ಷಾ, ಡಿಸೆಂಬರ್೨೦೧೪ ರಲ್ಲಿ ಸರ್ಕಾರ ಮತ್ತು ಸುಪ್ರಿಂ ಕೋರ್ಟ್ ಗೆ ಸಲ್ಲಿಸಿದ್ದ ವರದಿಯಲ್ಲಿ ಜಿನಿವಾದ ಎಚ್ ಎಸ್ ಬಿ ಸಿ ಬ್ಯಾಂಕ್ ನಲ್ಲಿನ ಕಪ್ಪು ಹಣದ ಮಾಲಿಕರನ್ನು ಶೀಘ್ರದಲ್ಲೆ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದರು.

SCROLL FOR NEXT