ಪ್ರಧಾನ ಸುದ್ದಿ

ದೆಹಲಿ ಚುನಾವಣೆ: ಮೋದಿಯ ಸೋಲು ಎಂದ ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ

Guruprasad Narayana

ನ್ಯೂಯಾರ್ಕ್: ಅಮೇರಿಕಾದ ಸರ್ಕಾರಿ ಅಧಿಕಾರಿಗಳು ದೆಹಲಿ ಚುನಾವಣೆಗಳ ಮೇಲೆ ಯಾವುದೇ ಪ್ರತಿಕ್ರಿಯೆ ನೀಡುವುದರಿಂದ ದೂರ ಉಳಿದಿದ್ದರೂ, ಆಮ್ ಆದ್ಮಿ ಪಕ್ಷದ ಬೃಹತ್ ಗೆಲುವನ್ನು ವಿಶ್ಲೇಷಿಸಿರುವ ಅಮೇರಿಕಾ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್ "ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೋಲು" ಎಂದು ಬಣ್ಣಿಸಿದೆ.

"ಅಮೇರಿಕ ರಾಷ್ಟ್ರಾಧ್ಯಕ್ಷ ಒಬಾಮಾ ಜೊತೆಗಿನ ಫಲಪ್ರದ ಶೃಂಗ ಸಭೆಯಿಂದ ಗಗನಕ್ಕೇರಿ ಬೀಗುತ್ತಿದ್ದ ಪ್ರಧಾನಿ ಮೋದಿ ಅವರನ್ನು ಸ್ವದೇಶದ ಚುನಾವಣೆ ಭೂಮಿಗಿಳಿಸಿದೆ" ಎಂದಿದೆ ಸಂಪಾದಕೀಯ.

ದೆಹಲಿ ವಿಧಾನಸಭಾ ಚುನಾವಣೆಗಳ ಮೇಲೆ ಪ್ರತಿಕ್ರಿಯಿಸಲು ಅಮೇರಿಕಾ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ "ಇದು ಭಾರತದ ಜನರ ಮತ್ತು ಸರ್ಕಾರದ ಆಂತರಿಕ ವಿಷಯ" ಎಂದು ಹೇಳಿ ಪ್ರತಿಕ್ರಿಸುವುದಕ್ಕೆ ನಿರಾಕರಿಸಿದ್ದಾರೆ.

SCROLL FOR NEXT