ಗಣರಾಜ್ಯೋತ್ಸವ ಪೆರೇಡ್ 
ಪ್ರಧಾನ ಸುದ್ದಿ

ಗಣರಾಜ್ಯೋತ್ಸವಕ್ಕೆ ೧೦೦ ಕೋಟಿ ವ್ಯಯಿಸುತ್ತೀರಿ, ರೈತರಿಗೆ ಪರಿಹಾರ ಧನ ನೀಡುವುದಿಲ್ಲ: ಸುಪ್ರೀಂ ತರಾಟೆ

ಗಣರಾಜ್ಯೋತ್ಸವ ಸಂಭ್ರಮಕ್ಕೆ ಕೇಂದ್ರ ಸರ್ಕಾರ 100 ಕೋಟಿ ವ್ಯಯಿಸುತ್ತದೆ ಆದರೆ ರೈತರ ಜಮೀನು ಸ್ವಾಧೀನಪಡಿಸಿಕೊಂಡಾಗ ಅವರಿಗೆ ಪರಿಹಾರ ನೀಡಲು

ನವದೆಹಲಿ: ಗಣರಾಜ್ಯೋತ್ಸವ ಸಂಭ್ರಮಕ್ಕೆ ಕೇಂದ್ರ ಸರ್ಕಾರ ೧೦೦ ಕೋಟಿ ವ್ಯಯಿಸುತ್ತದೆ ಆದರೆ ರೈತರ ಜಮೀನು ಸ್ವಾಧೀನಪಡಿಸಿಕೊಂಡಾಗ ಅವರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತದೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

"ನೀವು ಗಣರಾಜ್ಯೋತ್ಸವ ಪೆರೇಡ್ ಗೆ ೧೦೦ ಕೋಟಿ ವ್ಯಯ ಮಾಡುತ್ತೀರಿ ಆದರೆ ರೈತರ ಪರಿಹಾರ ಧನದ ವಿಷಯ ಬಂದಾಗ ಅರ್ಜಿ ಸಲ್ಲಿಸುತ್ತೀರಿ" ಎಂದು ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಹೇಳಿದ್ದಾರೆ.

ಪಂಜಾಬಿನ ಕಂಟೋನ್ ಮೆಂಟ್ ಪ್ರದೇಶದಲ್ಲಿ ರೈತರ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ರಕ್ಷಣಾ ಸಚಿವಾಲಯ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಹೀಗೆ ಅಭಿಪ್ರಾಯಪಟ್ಟಿದೆ.

ಪಂಜಾಬ್ ಮತ್ತು ಹರ್ಯಾಣ ಉಚ್ಛ ನ್ಯಾಯಾಲಯಗಳು ರೈತರಿಗೆ ಗಣನೀಯ ಪ್ರಮಾಣದ ಪರಿಹಾರ ಧನ ನೀಡಬೇಕೆಂದು ತಿಳಿಸಿದ್ದವು. ಇದರ ವಿರುದ್ಧ ರಕ್ಷಣಾ ಸಚಿವಾಲಯ ಅರ್ಜಿ ಸಲ್ಲಿಸಿತ್ತು.

ಹೈಕೋರ್ಟ್ ತೀರ್ಪಿಗೆ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, "ರೈತರು ನ್ಯಾಯವಾದ ಪರಿಹಾರ ಧನವನ್ನು ಪಡೆಯುತ್ತಿಲ್ಲ. ಸರ್ಕಾರ ಈ ವಿವಾದಗಳಿಗೆ ಇಷ್ಟೆಲ್ಲಾ ದುಡ್ಡು ವ್ಯಯಿಸುತ್ತದೆ, ಆದರೆ ರೈತರಿಗೆ ಹಣ ನೀಡುವಾಗ ಬೇರೆ ನಿಲುವು ತಳೆಯುತ್ತದೆ" ಎಂದು ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!