ನವದೆಹಲಿ: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲ್ಲ ಎಂದು ಹೇಳುವ ಮೂಲಕ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಶುಕ್ರವಾರ ನಿತೀಶ್ ಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ನಿತೀಶ್ ಅವರು ತುಂಬಾ ದೊಡ್ಡ ತಪ್ಪು ಮಾಡಿದ್ದಾರೆ. ನಾನು ಕೈಗೊಂಬೆಯಲ್ಲ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲಾರೆ. ನಾನು ತಪ್ಪಿತಸ್ಥ ಎಂದು ಸಾಬೀತು ಪಡಿಸಲಿ. ಹಾಗಾದರೆ ಮಾತ್ರ ನಾನು ರಾಜಿನಾಮೆ ನೀಡುವೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಂಝಿ ಹೇಳಿದ್ದಾರೆ.
ಬಿಹಾರದಲ್ಲಿನ ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ಹತಾಶೆಯಿಂದ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬೇಡಿ ಎಂದು ಗವರ್ನರ್ ಕೇಸರಿ ನಾಥ್ ತ್ರಿಪಾಠಿ ನಿತೀಶ್ ಕುಮಾರ್‌ಗೆ ಉಪದೇಶಿಸಿದ್ದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಬೆಂಬಲಿಗನಂತೆ ಗವರ್ನರ್ ವರ್ತಿಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದಕ್ಕೆ ತ್ರಿಪಾಠಿ ಈ ರೀತಿ ಪ್ರತಿಕ್ರಯಿಸಿದ್ದರು.
ಆದಾಗ್ಯೂ, ಫೆಬ್ರವರಿ 20ಕ್ಕೆ ಬಹುಮತ ಸಾಬೀತು ಪಡಿಸುವಂತೆ ಗವರ್ನರ್ ಮಾಂಝು ಅವರಿಗೆ ಆದೇಶಿಸಿದ್ದಾರೆ.