ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ನಟಿ ಹುಮಾ ಖುರೇಷಿ ಅವರಿಗೆ ಅಪಾರ ಗೌರವ, ಆದರೆ ಅವರ ಸಂಪುಟದ ಬಗ್ಗೆ ಅವರಿಗೆ ಅಸಮಧಾನವಿದೆ.
ಇಂದು ರಾಮಲೀಲಾ ಮೈದಾನದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇವರ ಜೊತೆ ಇನ್ನೂ ೬ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು ಅವರಲ್ಲಿ ಎಲ್ಲರೂ ಪುರುಷರೇ!
"ಅರವಿಂದ್ ಕೇಜ್ರಿವಾಲ್ ಅವರಿಗೆ ಬದಲಾವಣೆ ತರಲು ಈಗ ಹೆಚ್ಚಿನ ಅಧಿಕಾರ ಸಿಕ್ಕಿದೆ. ಒಳ್ಳೆಯ ಆಡಳಿತ ಮತ್ತು ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಎದುರು ನೋಡುತ್ತಿದ್ದೇವೆ. ಆದರೆ ಅವರ ಸಂಪುಟದಲ್ಲಿ ಮಹಿಳಾ ಪ್ರತಿನಿಧಿತ್ವವೇ ಇಲ್ಲ" ಎಂದು ನಟಿ ಹುಮಾ ಖುರೇಶಿ ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.