ಚಂದೌಲಿ: ಉತ್ತರಪ್ರದೇಶದ ಮುಘಲ್ಸಾರಾಯ್ ಪ್ರದೇಶದ ಧುಲ್ಹಿಪುರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ೧೨ ಜನ ಸಾವನ್ನಪ್ಪಿದ್ದಾರೆ ಹಾಗು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಕಳೆದ ರಾತ್ರಿ ಕುಸಿದ ಕಟ್ಟಡದಿಂದ ಐದು ಜನ ಪುರುಷರು ಐದು ಜನ ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಗಾಯಗೊಂಡಿರುವ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಮರುದ್ದೀನ್ ಎಂಬುವವರು ಈ ಕಟ್ಟಡದ ಮಾಲೀಕ. ಮೃತಪಟ್ಟವರಲ್ಲಿ ನಾಲ್ವರು ಕಟ್ಟಡ ನಿರ್ಮಿಸುತ್ತಿದ್ದ ಕಾರ್ಮಿಕರು ಮತ್ತು ಬಹುತೇಕ ಮಾಲಿಕನ ಕುಟುಂಬ ಸದಸ್ಯರು ಮತ್ತು ನಂಟರು ಎಂದು ಪೊಲೀಸ್ ಎಸ್ ಪಿ ಮುನಿರಾಜ್ ತಿಳಿಸಿದ್ದಾರೆ.
ಮೃತಪಟ್ಟ ಕುಟುಂಬ ಸದಸ್ಯರಿಗೆ ೩೦ ಸಾವಿರ ಪರಿಹಾರ ಧನ ನೀಡಲಾಗುವುದು ಎಂದು ಜಿಲ್ಲಾ ಮೆಜೆಸ್ಟ್ರೇಟ್ ಎನ್ ಕೆ ಸಿಂಗ್ ತಿಳಿಸಿದ್ದಾರೆ.