ಹೈದರಾಬಾದ್: ಅಪರೂಪದ ಬುದ್ಧ ಪ್ರತಿಮೆ ಎಂದು ಹೇಳಿ ಮಾರಾಟ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಪಂಜಗುಟ್ಟ ಪೊಲೀಸರು ೭ ಜನರನ್ನು ಬಂಧಿಸಿದ್ದಾರೆ. ಪೊಲೀಸರು ಬುದ್ಧನ ಪ್ರತಿಮೆ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಶೇಖ್ ಮೊಹಮ್ಮದ್ ಇರ್ಫಾನ್ ಬಾಷಾ, ಕೊಂಪಲ ಲೀಲಾ ಕುಮಾರ್, ಸಯ್ಯದ್ ಗೌಸ್ ಭಾಷಾ, ಅಬ್ದುಲ್ ಲತೀಫ್, ಪರಿವೇದ ಮುರಳಿ ಕೃಷ್ಣ ಗೌಡ, ಮೆತ್ರ ಪ್ರವೀಣ್ ಕುಮಾರ್ ಮತ್ತು ಶೇಕ್ ನಜೀರ್ ಭಾಷಾ ಬಂಧನಗೊಳಗಾದ ಆರೋಪಿಗಳು.
ಆರೋಪಿ ಶೇಕ್ ಮೊಹಮ್ಮದ್ ಭಾಷಾ ೭ ಕೆಜಿಯ ಕಂಚಿನ ಬುದ್ಧ ಪ್ರತಿಮೆಯನ್ನು ಕರ್ನೂಲಿನ ಏನ್ ಎಚ್ ೭ ರಸ್ತೆಯ ತುಂಗಭದ್ರ ನದಿಯಲ್ಲಿ ಕಂಡೆ ಎಂದು ಅವನ ಗೆಳೆಯ ಲೀಲಾ ಕುಮಾರ್ ಗೆ ತಿಳಿಸಿದ್ದಾನೆ. ಲೀಲಾ ಸಯದ್ ಗೌಸ್ ಭಾಷಾ ನನ್ನು ಸಂಪರ್ಕಿಸಿದ್ದಾನೆ.
ಇವರೆಲ್ಲರೂ ನಗರಕ್ಕೆ ಬಂದು ಅಬ್ದುಲ್ ಲತೀಫ್ ಮತ್ತು ಮುರಳಿ ಕೃಷ್ಣ ಗೌಡ ಅವರನ್ನು ಭೇಟಿ ಮಾಡಿದ್ದಾರೆ. ಇದು ಅತಿ ಅಪರೂಪದ ಬುದ್ಧ ಪ್ರತಿಮೆ ಎಂದು ಹೇಳಿ ೫೦ ಲಕ್ಷ ರೂ ಮೊತ್ತಕ್ಕೆ ಮಾರಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.