ದಿಗ್ವಿಜಯ್ ಸಿಂಗ್ 
ಪ್ರಧಾನ ಸುದ್ದಿ

'ಅರವಿಂದ್ ಕೇಜ್ರಿವಾಲ್' ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಮಾಡಿದ ಆರ್ ಎಸ್ ಎಸ್ ಯೋಜನೆಯ ಭಾಗ: ದಿಗ್ವಿಜಯ್ ಸಿಂಗ್

ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿ ಪಕ್ಷದ ಅಭೂತಪೂರ್ವ ಗೆಲುವಿಗೆ ಹೊಸ ತಿರುವು ನೀಡಲು ಕಾಂಗ್ರೆಸ್ ಪ್ರಯತ್ನಿಸಿದೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿ ಪಕ್ಷದ ಅಭೂತಪೂರ್ವ ಗೆಲುವಿಗೆ ಹೊಸ ತಿರುವು ನೀಡಲು ಕಾಂಗ್ರೆಸ್ ಪ್ರಯತ್ನಿಸಿದೆ. ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಮಾಡಿದ ಆರ್ ಎಸ್ ಎಸ್ ಯೋಜನೆಯ ಭಾಗ ಎಂದಿದ್ದಾರೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್.

"ಕಾಂಗ್ರೆಸ್ ಮುಕ್ತ ಭಾರತದ ಆರ್ ಎಸ್ ಎಸ್ ನ ದೊಡ್ಡ ಯೋಜನೆಯಲ್ಲಿ ಅರವಿಂದ್ ಕೇಜ್ರಿವಾಲ್ ಒಂದು ಭಾಗ. ಈಗ ಕೇಜ್ರಿವಾಲ್ ಅಭಿಮಾನಿಗಳು ಮತ್ತು ಆರ್ ಎಸ್ ಎಸ್ ನವರು ನನ್ನನ್ನು ದೂಷಿಸಬಹುದು ಎಂದು ನನಗೆ ತಿಳಿದಿದೆ" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

"ಅಣ್ಣಾ ಚಳವಳಿಯ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ ಎಂದು ಹೇಳಿದ್ದಾಗ ನನ್ನನು ಯಾರೂ ನಂಬಲಿಲ್ಲ. ನನ್ನನ್ನು ಹುಚ್ಚ ಎಂದರು. ಆದರೆ ಕೊನೆಗೆ ಅದು ನಿಜ ಎಂದು ಸಾಬೀತಾಯಿತು. ಈ ಬಾರಿಯೂ ನಿಜ ತಿಳಿಯುತ್ತದೆ" ಎಂದು ಕೂಡ ಟ್ವೀಟ್ ಮಾಡಿದ್ದರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!