ಪಣಜಿ: ಭೂಗತ ದೊರೆ ದಾವೂದ್ ಇಬ್ರಾಹಿಂ ತಂಡದ ಸದಸ್ಯನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ರಾತ್ರಿ ಪಣಜಿಯಿಂದ 10 ಕಿ.ಮೀ ದೂರದ ಸಲಿಗ ಹಳ್ಳಿಯಲ್ಲಿ ಶ್ಯಾಮ್ ಕಿಶೋರ್ ಗರಿಕಪಟ್ಟಿಯನ್ನು ಬಂಧಿಸಲಾಗಿದೆ ಎಂದು ಸೂಪರೆಂಡೆಂಟ್ ಆಫ್ ಪೊಲೀಸ್ ಕಾರ್ತಿಕ್ ಕಶ್ಯಪ್ ತಿಳಿಸಿದ್ದಾರೆ. ಅಲ್ಲದೆ ಇತ 1993ರ ಮುಂಬೈ ಸರಣಿ ಸ್ಫೋಟ, ಜೆ.ಜೆ ಆಸ್ಪತ್ರೆಯ ಶೂಟ್ಔಟ್ ಸೇರಿದಂತೆ ಸುಮಾರು 18 ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದರು.
ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಜೈಲು ಸೇರಿದ್ದ ಶ್ಯಾಮ್ 2003ರಲ್ಲಿ ಪೆರೋಲ್ ಪಡೆದ ಹೊರಬಂದಿದ್ದ ಇತ ತಲೆ ಮರೆಸಿಕೊಂಡಿದ್ದ. ನಕಲಿ ಗುರುತಿನಲ್ಲಿ ಸಲಿಗ ಹಳ್ಳಿಯಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಬಂಧನದ ವೇಳೆ ಇತನಿಂದ ಒಂದು ಪಿಸ್ತೂಲ್ ಮತ್ತು ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.