ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿ ವಿಧಾನಸಭಾ ಕ್ಷೇತ್ರವನ್ನು ತೆಲುಗು ದೇಶಂ ಪಕ್ಷ (ಟಿಡಿಪಿ) ಉಳಿಸಿಕೊಂಡಿದೆ.
ತನ್ನ ಸಮೀಪ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಆರ್ ಶ್ರೀದೇವಿ ಅವರನ್ನು ೧.೧೬ ಲಕ್ಷ ಮತಗಳ ಅಂತರದಿಂದ ಸೋಲಿಸುವ ಮೂಲಕ ಆಡಳಿತ ಪಕ್ಷದ ಎಂ ಸುಗುಣ ಉಪಚುನಾವಣೆಯಲ್ಲಿ ತಿರುಪತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಸುಗುಣಾ ಅವರ ಪತಿ ಎಂ ವೆಂಕಟರಮಣ ಅವರ ಅಕಾಲಿಕ ನಿಧನದಿಂದ, ಈ ಕ್ಷೇತ್ರದಲ್ಲಿ ಶುಕ್ರವಾರ ಉಪಚುನಾವಣೆ ನಡೆದಿತ್ತು.