ಪ್ರಧಾನ ಸುದ್ದಿ

ಮುಂಬೈ 'ನೈಟ್ ಲೈಫ್' ಬಗ್ಗೆ ಫಡ್ನವಿಸ್ ಜೊತೆ ಚರ್ಚಿಸಿದ ಆದಿತ್ಯ ಠಾಕ್ರೆ

Guruprasad Narayana

ಮುಂಬೈ: ಹುರುಪಿನ ಮುಂಬೈ ರಾತ್ರಿ ಜೀವನವನ್ನು ಮರುಕಳಿಸುವ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಜೊತೆ ಚರ್ಚಿಸಿದ್ದೇನೆ ಎಂದಿದ್ದಾರೆ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ.

"ಮುಂಬೈ ನೈಟ್ ಲೈಫ್ ಮೇಲಿನ ನನ್ನ ಪ್ರಸ್ತಾವನೆಯನ್ನು ಚರ್ಚೆ ಮಾಡಲು ಮಹಾರಾಷ್ಟ್ರದ ಮುಖ್ಯಂತ್ರಿಗಳ ಜೊತೆ ಸಭೆ ಇತ್ತು. ಶೀಘ್ರದಲ್ಲೆ ವಿವರಗಳನ್ನು ಟ್ವೀಟ್ ಮಾಡುತ್ತೇನೆ. ಸಂತಸದ ವಿಷಯ" ಎಂದು ನೆನ್ನೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

"ಈ ವರ್ಷದ ಕೊನೆಗೆ ವಾಣಿಜ್ಯ ರಾಜಧಾನಿಗೆ ನೈಟ್ ಲೈಫ್ ಮರುಕಳಿಸುವಂತೆ ಕಾನೂನಿಗೆ ಅಗತ್ಯ ತಿದ್ದುಪಡಿ ತರಲಾಗುವುದು" ಎಂದು ಖಾಸಗಿ ವಾಹಿನಿಯೊಂದಕ್ಕೆ ಅವರು ತಿಳಿಸಿದ್ದಾರೆ.

"ಹೋಟೆಲ್ ಗಳು ಮತ್ತು ಬಾರ್ ಗಳಿಗೆ ಇರುವ ಮಧ್ಯರಾತ್ರಿ ೧:೩೦ ರ ಗಡವನ್ನು ತೆಗೆದು ಹಾಕಲಾಗುವುದು ಹಾಗು ಅಗತ್ಯ ಕಾನೂನಿಗಳಿಗೆ ತಿದ್ದುಪಡಿ ತರಲಾಗುವುದು" ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮಗ ೨೪ ವರ್ಷದ ಆದಿತ್ಯ ತಿಳಿಸಿದ್ದಾರೆ.

"ಔಷಧಿ ಪೂರೈಸುವ ಮತ್ತು ಇತರ ಅಗತ್ಯ ಮಳಿಗೆಗಳೊಂದಿಗೆ ಮಾಲ್ ಗಳು ಮತ್ತು  ಕ್ಲಬ್ ಗಳು ೨೪ ಘಂಟೆಗಳು ತೆರೆದಿರುವ ಅವಕಾಶ ನೀಡಲಾಗುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.


SCROLL FOR NEXT