ಬೆಂಗಳೂರು: ಪಾಕ್ ಮೀನುಗಾರಿಕಾ ದೋಣಿಯನ್ನು ಸ್ಫೋಟಿಸಲು ತಾವು ಆದೇಶ ನೀಡಿದ್ದಾಗಿ ಬುಧವಾರ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಅಲ್ಲಗೆಳಿದಿದ್ದಾರೆ. ಮಾತ್ರವಲ್ಲದೆ ಇದು ಆಧಾರ ರಹಿತ ವರದಿ ಎಂದಿರುವ ಅವರು ಈ ರೀತಿ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದ್ದಾರೆ.
ಇದೀಗ ದೋಣಿ ಸ್ಫೋಟದ ಬಗ್ಗೆ ವಿವಾದ ಹುಟ್ಟಿಕೊಂಡಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2015 ಶೋಗೆ ಬಂದಿದ್ದ ಪರಿಕ್ಕರ್ ಪಾಕ್ ದೋಣಿ ಸ್ಫೋಟದ ಬಗ್ಗೆ ಎದ್ದಿರುವ ವಿವಾದಗಳ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ಕರೆದಿದ್ದರು.
ಪಾಕಿಸ್ತಾನದ ದೋಣಿಯನ್ನು ಸ್ಪೋಟಿಸಿದ್ದು ನಿಜವೇ? ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗ ಈ ಪ್ರಶ್ನೆಗೆ ಉತ್ತರಿಸಲು ಇದು ನ್ಯಾಯಾಲಯ ಅಲ್ಲ ಎಂದು ಪರಿಕ್ಕರ್ ಉತ್ತರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪರಿಕ್ಕರ್ ಹೇಳಿದ ವಿಷಯಗಳು ಇಂತಿವೆ