ಕಡತ ಸೋರಿಕೆ (ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಪೆಟ್ರೋಲಿಯಂ ಸಚಿವಾಲಯದ ನೌಕರರಿಂದ ಸರ್ಕಾರಿ ಕಡತಗಳ ಸೋರಿಕೆ!

ಸರ್ಕಾರದ ಗೋಪ್ಯವಾದ ಕಡತಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಪೆಟ್ರೋಲಿಯಂ ಸಚಿವಾಲಯದ ಇಬ್ಬರು ನೌಕರರು...

ನವದೆಹಲಿ: ಸರ್ಕಾರದ ಗೋಪ್ಯವಾದ ಕಡತಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಪೆಟ್ರೋಲಿಯಂ ಸಚಿವಾಲಯದ ಇಬ್ಬರು ನೌಕರರು ಸೇರಿದಂತೆ ಇತರ ಮೂವರನ್ನು ದೆಹಲಿ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ವರದಿಗಳ ಪ್ರಕಾರ ದೆಹಲಿ ಪೊಲೀಸರು ಗುರುವಾರ ಶಾಸ್ತ್ರೀ ಭವನಕ್ಕೆ ದಾಳಿ ಮಾಡಿದ್ದು, ಆರೋಪದ ಆಧಾರದ ಮೇರೆಗೆ ಕಚೇರಿಯ ಜವಾನ ಮತ್ತು ಗುಮಾಸ್ತನನ್ನು ಬಂಧಿಸಿದ್ದಾರೆ.

ಆದಾಗ್ಯೂ, ಪೆಟ್ರೋಲಿಯಂ ಸಚಿವಾಲಯದ ಉನ್ನತ ಅಧಿಕಾರಿಗಳು ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿತ ನೌಕರರು ಆರೋಪಿಸಿದ್ದಾರೆ. ಇವರ ಹೊರತಾಗಿ ಬಂಧಿತರಾದ ಮೂವರು ವ್ಯಕ್ತಿಗಳು ಪತ್ರಕರ್ತರೆಂದು ಹೇಳಲಾಗುತ್ತಿದೆ.

ಬಂಧಿತ ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆಗೊಳಪಡಿಸಲಾಗುವುದು.

ವಾಣಿಜ್ಯ ವ್ಯವಹಾರ ಕೇಂದ್ರಗಳಿಗೆ ಈ ಗೋಪ್ಯ ಕಡತಗಳ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಪೆಟ್ರೋಲಿಯಂ ಸಚಿವಾಲಯ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ