ತೀಸ್ತಾ ಸೇತಲ್ವಾಡ್‌ 
ಪ್ರಧಾನ ಸುದ್ದಿ

ತೀಸ್ತಾ ದಂಪತಿ ಬಂಧನಕ್ಕೆ ತಡೆ ವಿಸ್ತರಿಸಿದ ಸುಪ್ರೀಂ

ಗುಜರಾತ್‌ ಗಲಭೆ ಸಂತ್ರಸ್ತರ 1.51 ಕೋಟಿ ರೂ. ಪರಿಹಾರ ನಿಧಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತೀಸ್ತಾ ಸೇತಲ್ವಾಡ್‌...

ನವದೆಹಲಿ: ಗುಜರಾತ್‌ ಗಲಭೆ ಸಂತ್ರಸ್ತರ 1.51 ಕೋಟಿ ರೂ. ಪರಿಹಾರ ನಿಧಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತೀಸ್ತಾ  ಸೇತಲ್ವಾಡ್‌ ಹಾಗೂ ಆಕೆಯ ಪತಿ ಜಾವೇದ್ ಆನಂದ್ ಬಂಧನಕ್ಕೆ ನೀಡಿದ್ದ ತಡೆಯನ್ನು ಸುಪ್ರೀಂಕೋರ್ಟ್‌ ವಿಸ್ತರಿಸಿದೆ.

ಇದಕ್ಕೂ ಮುನ್ನ ನೀಡಿದ್ದ ಆದೇಶದಲ್ಲಿ ಸೇತಲ್ವಾಡ್‌ ದಂಪತಿಯನ್ನು ಫೆ.19ರವರೆಗೆ ಬಂಧಿಸದಂತೆ ಸುಪ್ರೀಕೋರ್ಟ್‌ ಆದೇಶ ನೀಡಿತ್ತು. ಗುರುವಾರ ಈ ಬಗ್ಗೆ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೇತಲ್ವಾಡ್‌ ಬಂಧನಕ್ಕೆ ನೀಡಿದ್ದ ತಡೆಯನ್ನು ವಿಸ್ತರಿಸಿ ತೀರ್ಪು ನೀಡಿದೆ.

ಅದೇ ವೇಳೆ  ಗುಜರಾತ್‌ ಪೊಲೀಸರು ಕೇಳಿರುವ ದಾನಿಗಳ ದಾಖಲೆ ಹಾಗೂ ದಾನ ಸಂಬಂಧಿ ವಿವರಗಳನ್ನು ಸಲ್ಲಿಸುವಂತೆ ಸೇತಲ್ವಾಡ್‌ ಹಾಗೂ ಆಕೆಯ ಎನ್‌ಜಿಒಗೆ ಪೀಠ  ನಿರ್ದೇಶನ ನೀಡಿದೆ. ಒಂದು ವೇಳೆ ತೀಸ್ತಾ ಹಾಗೂ ಆಕೆಯ ಪತಿ ಜಾವೇದ್‌ ವಿಚಾರಣೆಗೆ ಸಹಕರಿಸದಿದ್ದರೆ ಅವರಿಬ್ಬರ ಜಾಮೀನು ರದ್ದು ಮಾಡುವಂತೆ ಗುಜರಾತ್ ಪೊಲೀಸರು ಅರ್ಜಿ ಸಲ್ಲಿಸಬಹುದು ಎಂಬುದಾಗಿಯೂ  ಕೋರ್ಟ್‌ ತಿಳಿಸಿದೆ.

ವಿಚಾರಣೆ ವೇಳೆ ಗುಜರಾತ್‌ ಸರಕಾರವನ್ನು ಪ್ರಶ್ನಿಸಿದ ಪೀಠ, ತೀಸ್ತಾ ಸೇತಲ್ವಾಡ್‌ ಹಾಗೂ ಆಕೆಯ ಪತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಏನು ಅಗತ್ಯವಿದೆ ಎಂದು ಪ್ರಶ್ನಿಸಿತು. ಅಲ್ಲದೆ, ಇದು ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ವಿಷಯ ಎಂದು ಹೇಳಿತು.

ಗುಜರಾತ್‌ ಗಲಭೆ ಸಂತ್ರಸ್ತರ 1.51 ಕೋಟಿ ರೂ. ಪರಿಹಾರ ನಿಧಿಯನ್ನು  ದುರುಪಯೋಗಪಡಿಸಿದ ಆರೋಪ ಸೇತಲ್ವಾಡ್‌ ಹಾಗೂ ಆಕೆಯ ಪತಿ ಜಾವೇದ್ ಮೇಲಿದೆ. 2002 ಗುಜರಾತ್‌ ಗಲಭೆ ಸಂದರ್ಭದಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್‌ ಸಂಸದ ಇಶಾನ್‌ ಜಾಫ್ರಿ ಅವರ ತಂದೆ ತನ್ವೀರ್‌ ಜಾಫ್ರಿ ಮತ್ತು ಗುಲ್ಬರ್ಗ್‌ ಸೊಸೈಟಿಯ ನಿವಾಸಿ ಫಿರೋಜ್‌ ಗುಲ್ಜಾರ್‌ಗೂ ಕೂಡ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ. 2002ರ ಫೆಬ್ರವರಿಯಲ್ಲಿ ನಡೆದ ಗೋಧ್ರಾ ಗಲಭೆ ಸಂದರ್ಭ ಗುಲ್ಬರ್ಗ್‌ ಸೊಸೈಟಿಯಲ್ಲಿ ನಡೆದ ದೊಂಬಿಯಲ್ಲಿ ಸಂಸದ ಇಶಾನ್‌ ಜಾಫ್ರಿ ಸೇರಿ 68 ಮಂದಿ ಸಾವನ್ನಪ್ಪಿದ್ದರು. ಇದೇ ಗುಲ್ಬರ್ಗ್‌ ಸೊಸೈಟಿ ಗಲಭೆ ಸಂತ್ರಸ್ತರಿಗೆ ನೀಡಿದ್ದ ಹಣವನ್ನು ಸೇತಲ್ವಾಡ್‌ ದುರುಪಯೋಗಪಡಿಸಿದ್ದಾರೆ ಎಂದು ದೂರಿ 12 ಮಂದಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ