ಅಮರ್ತ್ಯ ಸೇನ್ 
ಪ್ರಧಾನ ಸುದ್ದಿ

ಎರಡನೇ ಅವಧಿಗೆ ನಳಂದಾ ವಿವಿ ಕುಲಪತಿಯಾಗಲ್ಲ: ಅಮರ್ತ್ಯ ಸೇನ್

ನಳಂದಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನಾನು ಮುಂದುವರಿಯುವುದು ನರೇಂದ್ರ ಮೋದಿ ಸರ್ಕಾರಕ್ಕೆ ಇಷ್ಟವಿಲ್ಲ ಎಂದು ...

ನವದೆಹಲಿ: ನಳಂದಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನಾನು ಮುಂದುವರಿಯುವುದು ನರೇಂದ್ರ ಮೋದಿ ಸರ್ಕಾರಕ್ಕೆ ಇಷ್ಟವಿಲ್ಲ ಎಂದು ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಹೇಳಿದ್ದಾರೆ.

ನಳಂದಾ ವಿವಿಯ ಕುಲಪತಿಯಾಗಿ ಎರಡನೇ ಅವಧಿಯಲ್ಲಿ ಮುಂದುವರಿಯಲು ಇಚ್ಛಿಸದ ಸೇನ್ ಇದೀಗ ಕುಲಪತಿಯ ಉಮೇದುವಾರಿಕೆ ವಾಪಸ್ ತೆಗೆದುಕೊಂಡಿದ್ದಾರೆ.

ಮೋದಿಯವರನ್ನು ಟೀಕಿಸುತ್ತಲೇ ಬರುತ್ತಿದ್ದ ಅಮರ್ತ್ಯ ಸೇನ್ ಎರಡನೇ ಅವಧಿಗೆ ಹುದ್ದೆಗೆ ಅಪೇಕ್ಷೆ ಸಲ್ಲಿಸದಂತೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಒತ್ತಡ ಹೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಜನವರಿ 13ರಂದು ನಳಂದಾ ವಿವಿಯ ಆಡಳಿತ ಮಂಡಳಿಯ ಸಭೆಯಲ್ಲಿ ತಾನು ಎರಡನೇ ಅವಧಿಗೆ ವಿವಿಯ ಕುಲಪತಿಯಾಗಿ ಮುಂದುವರಿಯುವಂತೆ ನಡೆದಿರುವ ಸರ್ವಾನುಮತದ ಆಯ್ಕೆಯ ಹೊರತಾಗಿಯೂ ತಾನು ಎರಡನೇ ಅವಧಿಗೆ ಹುದ್ದೆಯಲ್ಲಿ ಮುಂದುವರಿಯಲು ಬಯಸುವುದಿಲ್ಲ ಎಂದು ಸೇನ್ ವಿವಿಯ ಆಡಳಿತ ಮಂಡಳಿಗೆ ಬರೆದಿರುವ 5 ಪುಟಗಳ ಪತ್ರದಲ್ಲಿ ಹೇಳಿದ್ದಾರೆ.

ಸರ್ಕಾರದ ಅನುಮೋದನೆ ಇಲ್ಲದಿರುವ ಕಾರಣಕ್ಕೆ ಸಂದರ್ಶಕ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಕೂಡಾ ನಾನು ಎರಡನೇ ಅವಧಿಗೆ ಕುಲಪತಿಯಾಗಿ ಮುಂದುವರಿಯುವುದಕ್ಕೆ ತಮ್ಮ ಒಪ್ಪಿಗೆಯನ್ನು ನೀಡಲು ಸಾಧ್ಯವಾಗಿಲ್ಲ ಎಂದು ಸೇನ್  ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

ಆಡಳಿತ ಮಂಡಳಿಯ ಸರ್ವಾನುಮತದ ನಿರ್ಣಯಕ್ಕೆ ಅನುಮೋದನೆ ನೀಡುವ ಅಥವಾ ನೀಡದಿರುವ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿದ್ದರೂ ಅದು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ವಿವಿಯ ಆಡಳಿತದ ಮಂಡಳಿಯ ನಿರ್ಧಾರವನ್ನು ನಿರಸನಗೊಳಿಸುವ ತಂತ್ರವೇ ಆಗಿಗೆ ಎಂದು ಸೇನ್ ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ