ನವದೆಹಲಿ: ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ಹೊರನಡೆಯುತ್ತಿರುವ ಜಿತನ್ ರಾಮ್ ಮಾಂಝಿ ತನಗೆ ಬೆದರಿಕೆಯೊಡ್ಡಿರುವವರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಬೆದರಿಕೆಯೊಡ್ಡಿದವರು ಯಾರು ಎಂದು ಮಾಂಝಿ ಅವರಲ್ಲಿ ಕೇಳಿದಾಗ ಈ ಬಗ್ಗೆ ತನಿಖೆ ನಡೆಸಿ ಯಾರು ಎಂದು ಪತ್ತೆ ಹಚ್ಚಬೇಕಾದು ಪೊಲೀಸರ ಕೆಲಸ ಎಂದು ಉತ್ತರಿಸಿದ್ದಾರೆ.
ನನಗೆ ಬೆದರಿಕೆಯೊಡ್ಡಿದ ಕಾರಣ ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯುತ್ತಿದ್ದೇನೆ. ನನಗೆ ಹಾಗು ನನ್ನ ಬೆಂಬಲಿಗರಿಗೆ ಜೀವ ಬೆದರಿಕೆ ನೀಡಲಾಗಿದೆ. ನನಗೆ ಮತ ನೀಡಿದರೆ ಹಲ್ಲೆ ಮಾಡಲಾಗುವುದು ಎಂದು ನನ್ನ ಶಾಸಕರಿಗೆ ಬೆದರಿಕೆಯೊಡ್ಡಲಾಗಿತ್ತು ಎಂದು ಮಾಂಝಿ ಹೇಳಿದ್ದಾರೆ.
ನಾಳೆ ನಿತೀಶ್ ಕುಮಾರ್ ಪ್ರತಿಜ್ಞಾ ಸ್ವೀಕಾರ
ಜನತಾದಳದ ಹಿರಿಯ ನಾಯಕ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಅಧಿಕಾರಕ್ಕೇರಿದ್ದಾರೆ. ನಾಳೆ (ಭಾನುವಾರ) ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.