ಪ್ರಧಾನ ಸುದ್ದಿ

ಭೂ ಸ್ವಾಧೀನ ಸುಗ್ರೀವಾಜ್ಞೆ: ಕೇಜ್ರಿವಾಲ್ ಭೇಟಿ ಮಾಡಲಿರುವ ಅಣ್ಣಾ

Guruprasad Narayana

ಮುಂಬೈ: ಭೂ ಸ್ವಾಧೀನ ಸುಗ್ರೀವಾಜ್ಞೆ ವಿರುದ್ಧದ ಚಳವಳಿ ಹಿನ್ನಲೆಯಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಇಂದು ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಭೇಟಿ ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ನಡೆಯಲಿದೆ ಎಂದು ಹಜಾರೆ ಅವರ ನಿಕಟವರ್ತಿ ದತ್ತಾ ಅವಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಜಾರಿಯಲ್ಲಿರುವ ಭೂ ಸ್ವಾಧೀನ ಕಾಯ್ದೆಯ ಬದಲಾಗಿ ಹೊಸ ಕಾಯ್ದೆಯನ್ನು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಜಾರಿಗೆ ತರಲು ಕೇಂದ್ರ ಎನ್ ಡಿ ಎ ಸರ್ಕಾರ ಪ್ರಯತ್ನಿಸುತ್ತಿದೆ.

ಸದ್ಯದ ಭೂಸ್ವಾದೀನ ಕಾಯ್ದೆ ೨೦೧೩ ರ ಪ್ರಕಾರ ಒಂದು ಭಾಗದ ಜಮೀನನ್ನು ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಸ್ವಾಧೀನಪಡಿಸಿಕೊಳ್ಳಲು ಶೇಕಾಡ ೭೦ ಭೂಮಾಲೀಕರ ಒಪ್ಪಿಗೆ ಹಾಗೂ ಖಾಸಗಿ ಯೋಜನೆಗಳಿಗೆ ವಶಪಡಿಸಿಕೊಳ್ಳಲು ೮೦% ಭೂಮಾಲಿಕರ ಒಪ್ಪಿಗೆ ಅತ್ಯಗತ್ಯ.

ಆದರೆ ಕಳೆದ ಡಿಸೆಂಬರ್ ನಲ್ಲಿ ಪ್ರಧಾನಿ ಮೋದಿ ನಾಯಕತ್ವದ ಎನ್ ಡಿ ಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೈಗಾರಿಕಾ ಯೋಜನೆಗಳಿಗೆ, ಸರ್ಕಾರ-ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ, ಹಳ್ಳಿಗಾಡಿನ ಮೂಲಸೌಕರ್ಯ ಯೋಜನೆಗಳಿಗೆ, ಕೈಗೆಟಕುವ ಆಶ್ರಯ ಯೊಜನೆಗಳಿಗೆ ಹಾಗೂ ಭದ್ರತಾ ಯೋಜನೆಗಳಿಗೆ ಐದು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಯಾರ ಒಪ್ಪಿಗೆಯೂ ಅವಶ್ಯಕ ಇಲ್ಲ ಎಂದು ಬದಲಾಯಿಸಿತ್ತು. ಇದಕ್ಕೆ ಸಾಮಾಜಿಕ ಕಾರ್ಯಕರ್ತರ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಬಂದಿತ್ತು.

SCROLL FOR NEXT