ಗಾಂಜಾ ಕಾನೂನುಬದ್ಧಗೊಳಿಸಿದ ಅಮೇರಿಕಾದ ಮೂರನೆ ರಾಜ್ಯ ಅಲಾಸ್ಕಾ
ವಾಶಿಂಗ್ಟನ್ ಮತ್ತು ಕೊಲೊರಾಡೊ ರಾಜ್ಯಗಳ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಅಮೆರಿಕಾದ ಅಲಾಸ್ಕಾ ರಾಜ್ಯ ಉಲ್ಲಾಸದ ಸೇವನೆಗೆ
ಲಾಸ್ ಏಂಜಲೀಸ್: ವಾಶಿಂಗ್ಟನ್ ಮತ್ತು ಕೊಲೊರಾಡೊ ರಾಜ್ಯಗಳ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಅಮೆರಿಕಾದ ಅಲಾಸ್ಕಾ ರಾಜ್ಯ ಉಲ್ಲಾಸದ ಸೇವನೆಗೆ ಗಾಂಜಾವನ್ನು (ಮಾರ್ವಾನ) ಕಾನೂನು ಬದ್ಧ ಮಾಡಿದೆ.
ಇದರ ಸೇವನೆ ಅಮೇರಿಕಾದ ಫೆಡರಲ್ ಕಾನೂನಿನಲ್ಲಿ ಇನ್ನೂ ಕಾನೂನು ಬಾಹಿರವಾಗಿದ್ದರೂ, ಅಲಾಸ್ಕಾ ರಾಜ್ಯದ ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ತಿಳಿದು ಬಂದಿದೆ.
ಈ ತಿದ್ದುಪಡಿಯ ನಂತರ ಈಗ ಅಲಾಸ್ಕಾದ ೨೧ ವರ್ಷ ಮೇಲ್ಪಟ್ಟವರು ಕಾನೂನು ಬದ್ಧವಾಗಿ ೨೮ ಗ್ರಾಂ ಗಾಂಜಾವನ್ನು ಇಟ್ಟುಕೊಳ್ಳಬಹುದು, ಸೇವಿಸಬಹುದು ಹಾಗೂ ೬ ಗಾಂಜಾ ಗಿಡಗಳನ್ನು ಬೆಳೆಯಬಹುದಾಗಿದೆ.
ಈ ತಿದ್ದುಪಡಿಗೆ ನಾಗರಿಕರ ಮತದಾನ ನಡೆದಿತ್ತು. ನವೆಂಬರ್ ನಲ್ಲಿ ಇದರ ಪರವಾಗಿ ಹೆಚ್ಚಿನ ಮತ ಬಿದ್ದಿದ್ದು, ಜುಲೈ ೧ ರಿಂದ ಹೊಸ ಕಾನೂನು ಜಾರಿಗೆ ಬರಲಿದೆ ಎನ್ನಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.