ಮನೋಹರ್ ಪರ್ರಿಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಾನ್ ವೇಸ್ ಲೇ ಡ್ರೈನ್ 
ಪ್ರಧಾನ ಸುದ್ದಿ

ರಫೇಲ್ ಫೈಟರ್ ಜೆಟ್ ಒಪ್ಪಂದ: ಭಾರತ ಫ್ರಾನ್ಸ್ ಮಾತುಕತೆ

ಭಾರತದ ಪ್ರವಾಸದಲ್ಲಿರುವ ಫ್ರಾನ್ಸ್ ರಕ್ಷಣಾ ಸಚಿವ ಜಾನ್ ವೇಸ್ ಲೇ ಡ್ರೈನ್ ಮತ್ತು ತಮ್ಮೊಂದಿಗೆ ಕರೆತಂದಿರುವ ರಫೇಲ್ ಫೈಟರ್ ಜೆಟ್ ವಿಮಾನಗಳ

ನವದೆಹಲಿ: ಭಾರತದ ಪ್ರವಾಸದಲ್ಲಿರುವ ಫ್ರಾನ್ಸ್ ರಕ್ಷಣಾ ಸಚಿವ ಜಾನ್ ವೇಸ್ ಲೇ ಡ್ರೈನ್ ಮತ್ತು ತಮ್ಮೊಂದಿಗೆ ಕರೆತಂದಿರುವ ರಫೇಲ್ ಫೈಟರ್ ಜೆಟ್ ವಿಮಾನಗಳ ಉತ್ಪಾದಕ ದಸ್ಸಾಲ್ಟ್ ಏವಿಯೇಶನ್ ನ ಉನ್ನತ ಅಧಿಕಾರಿಗಳ ಸಮಿತಿ ಮಂಗಳವಾರ ಭಾರತದ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರನ್ನು ಭೇಟಿ ಮಾಡಿ ೯೦ ನಿಮಿಷಗಳವರೆಗೆ ಮಾತುಕತೆ ನಡೆಸಿದರು.

ರಕ್ಷಣಾ ಸಚಿವಾಲಯದ ಅಧಿಕಾರಿಗಳು ಯಾವುದೇ ಮಾಹಿತಿ ನೀಡುವುದರಿಂದ ದೂರ ಉಳಿದಿದ್ದರು ಕೂಡ, ಈ ಚರ್ಚೆ ಫಲಪ್ರದವಾಗಿದ್ದು ಮೂಲಗಳ ಪ್ರಕಾರ ಜೆಟ್ ವಿಮಾನಗಳ ವ್ಯವಹಾರ ಕುದುರಿದೆ ಎಂದು ತಿಳಿದುಬಂದಿದೆ.

"ಸಂಧಾನ ಮಾತುಕತೆ ಅಂತಿಮ ಹಂತದಲ್ಲಿದೆ. ಇದರ ಬಗ್ಗೆ ಈ ಹಂತದಲ್ಲಿ ಏನೂ ಹೇಳಲಾಗುವುದಿಲ್ಲ. ದರ ಸಂಧಾನ ಸಮಿತಿಯ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ" ಎಂದು ಹಿರಿಯ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.

೧೨೬ ಜೆಟ್ ಫೈಟರ್ ವಿಮಾನಗಳನ್ನು ಕೊಳ್ಳುವ ಈ ಒಪ್ಪಂದ, ಇಲ್ಲಿಯವರೆಗಿನ ಎಲ್ಲ ರಕ್ಷಣಾ ಒಪ್ಪಂದಗಳಿಗೆ ಅಮ್ಮ ಎನ್ನಲಾಗುತ್ತಿದೆ. ರಕ್ಷಣಾ ಧಿಕಾರಿಗಳ ಪ್ರಕಾರ ಈ ವ್ಯವಹಾರದ ಒಟ್ಟು ಬಜೆಟ್ ಅನ್ನು ೨೦ ಬಿಲಿಯನ್ ಡಾಲರ್ ಗೆ ಏರಿಸಲಾಗಿದೆ ಎನ್ನಲಾಗಿದೆ. ೨೦೦೭ ರಲ್ಲಿ ಗುತ್ತಿಗೆ ಕರೆದಿದ್ದಾಗ ಈ ವ್ಯವಹಾರದ ಮೊತ್ತ ೧೨ ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು.

ಈಗ ಮರು ಮೌಲ್ಯಮಾಪನದ ನಂತರ ಮೂಲಗಳ ಪ್ರಕಾರ ಎಚ್ ಎ ಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್.) ಸಹಯೋಗದಲ್ಲಿ ಉತ್ಪಾದನೆಯಾಗಲಿರುವ ೧೦೮ ಫೈಟರ್ ಜೆಟ್ ವಿಮಾನಗಳ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ದಸ್ಸಾಲ್ಟ್ ನಿರಾಕರಿಸಿದೆ. ಮೂಲ ಒಪ್ಪಂದದ ಪ್ರಕಾರ ೧೨೮ ಜೆಟ್ ವಿಮಾನಗಳಲ್ಲಿ ೧೮ ವಿಮಾನಗಳನ್ನು ದಸ್ಸಾಲ್ಟ್ ಏವಿಯೇಶನ್ ನೇರವಾಗಿ ಪೂರೈಸಲಿದ್ದು ಇನ್ನುಳಿದ ೧೦೮ ವಿಮಾನಗಳನ್ನು ಬೆಂಗಳೂರಿನ ಎಚ್ ಎ ಎಲ್ ಘಟಕದಲ್ಲಿ ನಿರ್ಮಾಣ ಮಾಡುವಂತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!