ಪ್ರಧಾನಿ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ 
ಪ್ರಧಾನ ಸುದ್ದಿ

ಅದಾನಿ ಆಸ್ತಿ ೨೫ ಸಾವಿರ ಕೋಟಿ ಹೆಚ್ಚಳ, 'ಅಚ್ಚೆ ದಿನ್' ಬಂತು: ಪ್ರಕಾಶ್ ಕಾರಟ್ ಲೇವಡಿ

ಈಗ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾಮಿ ಅವರ ಆಸ್ತಿ ಒಂದು ವರ್ಷದಲ್ಲಿ ೨೫ ಸಾವಿರ ಕೋಟಿ ವೃದ್ಧಿ ಕಂಡಿರುವುದರಿಂದ

ಅಗರ್ತಲಾ: ಈಗ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾಮಿ ಅವರ ಆಸ್ತಿ ಒಂದು ವರ್ಷದಲ್ಲಿ ೨೫ ಸಾವಿರ ಕೋಟಿ ವೃದ್ಧಿ ಕಂಡಿರುವುದರಿಂದ ಬಿಜೆಪಿ ಆಳ್ವಿಕೆ ಸಮಯದಲ್ಲಿ ದೇಶಕ್ಕೆ 'ಅಚ್ಚೆ ದಿನ್' (ಒಳ್ಳೆಯ ದಿನಗಳು) ಬಂದಿವೆ ಎಂದು ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬುಧವಾರ ಲೇವಡಿ ಮಾಡಿದ್ದಾರೆ.

"ತಮ್ಮ ೯ ತಿಂಗಳ ಆಳ್ವಿಕೆಯಲ್ಲಿ ನರೇಂದ್ರ ಮೋದಿ ಸರ್ಕಾರ, ಉದ್ಯಮಿಗಳು, ಹಣವಂತರು ಮತ್ತು ಕಾರ್ಪೋರೆಟ್ ವಲಯದ ಹಿತಾಸಕ್ತಿ ಕಾಯಲು ದಿನಂಪೂರ್ತಿ ಕೆಲಸ ಮಾಡಿದ್ದಾರೆ ಹಾಗು ರೈತರ, ಕಾರ್ಮಿಕರ ಮತ್ತು ಬಡ ಜನರ ವಿರುದ್ಧ ಕೆಲಸ ಮಾಡಿದ್ದಾರೆ" ಎಂದಿದ್ದಾರೆ ಕಾರಟ್.

ಸಿಪಿಐ(ಎಂ) ಪಕ್ಷದ ೨೧ ನೇ ರಾಜ್ಯ ಸಮಾವೇಶದ ೪ ದಿನಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲ್ಲಿದ್ದಲು ಮತ್ತು ವಿಮಾ ಕ್ಷೇತ್ರವನ್ನು ವಿದೇಶಿಯರು ಮತ್ತು ಕಾರ್ಪೋರೆಟ್ ವಲಯವಕ್ಕೆ ತೆರೆದಿಡಲು ಸಂಸತ್ ಒಪ್ಪಿಗೆಯಿಲ್ಲದೆ ಪ್ರತ್ಯೇಕ ಕಾಯ್ದೆಗಳನ್ನು ಎನ್ ಡಿ ಎ ಸರ್ಕಾರ ಮಾಡಿದೆ ಎಂದು ಕೂಡ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz closure: ಹಾರ್ಮುಜ್ ಜಲಸಂಧಿ ಬಂದ್, ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತ ಹಡಗುಗಳು!

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ರಾಜ್ಯ ಸರ್ಕಾರ ನಿಯಮದ ಮಿತಿಯೊಳಗೆ ಸಾಲ ಮಾಡಿದೆ: ಸಿಎಂ ಸಿದ್ದರಾಮಯ್ಯ ಸಮರ್ಥನೆ

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಹೆಚ್ಚುತ್ತಿರುವ ಸಬ್ಸಿಡಿ: ಗ್ರಾಮ ಪಂಚಾಯಿತಿ ಅನುದಾನಕ್ಕೆ ರಾಜ್ಯ ಸರ್ಕಾರ ಕೊಕ್- CAG ವರದಿ

SCROLL FOR NEXT