ಸತೀಶ್ ಜಾರಕಿಹೊಳಿ 
ಪ್ರಧಾನ ಸುದ್ದಿ

ಜಾರಕಿಹೊಳಿಗೆ ಹೆಚ್ಚುವರಿ ಖಾತೆ ನೀಡಲು ಸಿಎಂ ನಿರ್ಧಾರ

ಖಾತೆ ಬದಲಾವಣೆ ಬಯಸಿ ರಾಜಿನಾಮೆ ನೀಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಬೆಂಗಳೂರು: ಖಾತೆ ಬದಲಾವಣೆ ಬಯಸಿ ರಾಜಿನಾಮೆ ನೀಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಖಾತೆ 'ಭಾಗ್ಯ' ದಯಪಾಲಿಸಲು ಮುಂದಾಗಿದ್ದಾರೆ.

ಈ ಸಿಎಂ ಅಧಿಕೃತವಾಗಿ ತಮ್ಮ ಕಚೇರಿಯಿಂದ ರಾಜಭವನಕ್ಕೆ ಇಂದು ಪತ್ರ ರವಾನಿಸಲು ನಿರ್ಧರಿಸಿದ್ದು, ಈ ಸಂಬಂಧ ಸಿಎಂ ನಿನ್ನೆ ತಮ್ಮ ಆಪ್ತರ ಜತೆ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಮಾಜ ಕಲ್ಯಾ ಖಾತೆ ಕೋರಿ ಜಾರಕಿಹೊಳಿ ಅವರು ರಾಜಿನಾಮೆ ನೀಡಿದ್ದರು. ಆದರೆ ಅದು ಸಿದ್ದು ಆಪ್ತರಾದ ಆಂಜನೇಯ ಅವರ ಬಳಿ ಇದೆ. ರಾಜಿನಾಮೆ ಪ್ರಹಸನ ಮುಕ್ತಾಯಗೊಳಿಸುವಾಗ ಜಾರಕಿಹೊಳಿ ಅವರಿಗೆ ತಮ್ಮ ಬಳಿ ಇರುವ ಸಣ್ಣ ಕೈಗಾರಿಕೆ ಖಾತೆ ನೀಡುವುದಾಗಿ ಸಿದ್ದು ಭರವಸೆ ನೀಡಿದ್ದರು. ಆದರೆ ಸಮಯ ಕೂಡಿ ಬಂದಿರಲಿಲ್ಲ. ದಲಿತ ಸಿಎಂ ವಾದ ತಾರಕಕ್ಕೇರಿದ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರ ನಡೆಸಿರುವ ಸಿದ್ದು ಬಣ ತಕ್ಷಣ ಜಾರಕಿಹೊಳಿ ಅವರಿಗೆ ಹೆಚ್ಚುವರಿ ಖಾತೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ