ಚೆನ್ನೈ: ಪಕ್ಷದ ಕಾರ್ಯಕರ್ತರ ಆಸೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಎಂ ಕರುಣಾನಿಧಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಯಾವುದೇ ಬಯಕೆ ಇಲ್ಲ ಎಂದು ಶನಿವಾರ ತಿಳಿಸಿದ್ದಾರೆ. ಈಗ ತಮ್ಮ ಚಿತ್ತ ಇರುವುದು ಪಕ್ಷವನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ಎಂದಿರುವ ಅವರು ಜನರಿಗೆ ಸೇವೆ ಮಾಡುವ ಚಳವಳಿಯನ್ನು ಮುಂದುವರೆಸಿಕೊಂಡು ಹೋಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ತಮ್ಮ ಮಗ, ಡಿಎಂಕೆ ಪಕ್ಷದ ಖಜಾಂಚಿ ಎಂ ಕೆ ಸ್ಟಾಲಿನ್ ಅವರ ೬೩ನೆ ಹುಟ್ಟುಹಬ್ಬದ ಸಂಭ್ರಮದ ವೇಳೆಯಲ್ಲಿ ೫ ಬಾರಿ ಮುಖ್ಯಮಂತ್ರಿಯಾಗಿರುವ ೯೧ ವರ್ಷದ ಕರುಣಾನಿಧಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ.
ಸಿ ಎನ್ ಅಣ್ಣಾದೊರೈ ಸ್ಥಾಪಿಸಿದ ಡಿಎಂಕೆ ಪಕ್ಷ ತಮಿಳು ಜನರ ದ್ರಾವಿಡ ಅಸ್ಮಿತೆಗಾಗಿ ಹೋರಾಡಿದ ಪಕ್ಷ. ಅಣ್ಣಾದೊರೈ ಮತ್ತು ಪೆರಿಯರ್ ಎಂದೇ ಹೆಸರುವಾಸಿಯಾದ ಇ ವಿ ರಾಮಸ್ವಾಮಿಯವರ ಆತ್ಮಾಭಿಮಾನದ ತತ್ವಗಳನ್ನು ಪಾಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಮ್ಮ ಪಕ್ಷ ತಮಿಳು ಸಮಾಜನ ಸೇವೆಗಾಗಿ ಜನ್ಮ ತಳೆದದ್ದು ಅಧಿಕಾರಕ್ಕಲ್ಲ ಎಂದಿದ್ದಾರೆ.