ಪ್ರಧಾನ ಸುದ್ದಿ

ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು, ಮನೆ ತೊರೆದ ನಾಗರಿಕರು

Guruprasad Narayana

ಸಿಡ್ನಿ: ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿ ಹೆಚ್ಚುತ್ತಿರುವ ಕಾಳ್ಗಿಚ್ಚಿನಿಂದ ಹಲವಾರು ಜನ ತಮ್ಮ ಮನೆಗಳನ್ನು ತೊರೆದಿದ್ದಾರೆ. ವಿಪರೀತ ಗಾಳಿಯಿಂದ ಕಾಳ್ಗಿಚ್ಚನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ದಕ್ಷಿಣ ಆಸ್ಟ್ರೇಲಿಯಾ ಮತ್ತು ವಿಕ್ಟೋರಿಯಾ ರಾಜ್ಯಗಳಲ್ಲಿ ಕಾಳ್ಗಿಚ್ಚಿನಿಂದ ಆರು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದರೂ ನಾಗರಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

೩೦ ಡಿಗ್ರಿಗಿಂತಲೋ ಹೆಚ್ಚಿನ ಉಷ್ಣಾಂಶ, ಕಾಳ್ಗಿಚ್ಚಿನ ವಿರುದ್ಧ ಹೋರಾಡುತ್ತಿರುವವರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಕಾಳ್ಗಿಚ್ಚನ್ನು ನಿಯಂತ್ರಿಸಲು ದಿನಗಳೇ ಬೇಕಾಗಬಹುದು ಎಂದಿದ್ದಾರೆ ಅಧಿಕಾರಿಗಳು.

ಬೇಸಿಗೆಯ ತಿಂಗಳುಗಳಲ್ಲಿ ಈ ವಿಧ್ವಂಸಕ ಕಾಳ್ಗಿಚ್ಚುಗಳು ಆಸ್ಟ್ರೇಲಿಯಾದಲ್ಲಿ ಸರ್ವೇ ಸಾಮಾನ್ಯ. ೨೦೦೯ ರ ಕಾಳ್ಗಿಚ್ಚಿನಲ್ಲಿ ಸುಮಾರು ೧೭೩ ಜನ ಮೃತಪಟ್ಟು ೨೦೦೦ ಕ್ಕಿಂತಲೂ ಹೆಚ್ಚು ಮನೆಗಳು ನಾಶವಾಗಿದ್ದವು.

SCROLL FOR NEXT