ಪ್ರಧಾನ ಸುದ್ದಿ

'ಘರ್ ವಾಪಸಿ' ವಿರುದ್ಧ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡ ಅಸದ್

Guruprasad Narayana

ಹೈದರಾಬಾದ್: ಮಾಜಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ನ ಅಧ್ಯಕ್ಷ ಅಸಾದುದ್ದೀನ್ ಒವಾಸಿ ಅವರ  "ಇಸ್ಲಾಂ ಬೇರೆಲ್ಲಾ ಧರ್ಮಗಳ ನಿಜ ಮೂಲ" ಮತ್ತು "ಹುಟ್ಟುವ ಪ್ರತಿ ಮಗುವೂ ಮುಸ್ಲಿಂ" ಎಂಬ ಹೇಳಿಕೆಗಳಿಗೆ ವಿವಿಧ ಪಕ್ಷಗಳು ಸೋಮವಾರ ತೀಕ್ಷ್ಣವಾಗಿ ಪ್ರತಿಕ್ರಿಸಿವೆ. ಈ ಹೇಳಿಕೆಗಳನ್ನು ವಿಕೃತ ಎಂದಿದೆ ತೆಲಂಗಾಣ ಬಿಜೆಪಿ ಘಟಕ ಹಾಗೆಯೇ ಎನ್ ಸಿ ಪಿ ಪಕ್ಷ ಇದು ಕಪಟ ತಂತ್ರ ಎಂದಿದೆ.

ಇವ್ಯಾವ ಪ್ರತಿಕ್ರಿಯೆಗಳಿಂದಲೂ ಧೃತಿಗೆಡದ ಒವಾಸಿ, "ಇದು ನನ್ನ ನಂಬಿಕೆ. ಇಸ್ಲಾಂ ಧರ್ಮ ನಮ್ಮೆಲ್ಲಾರ ಮೂಲ ಮನೆ. ಪ್ರಜಾಪ್ರಭುತ್ವದಲ್ಲಿ ನನ್ನ ವಿಚಾರಗಳನ್ನು ಮುಂದಿಡಬಹುದಾಗಿದೆ. ನೀವು ಒಪ್ಪದೇ ಇರುವುದಕ್ಕೂ ಸಾಧ್ಯತೆ ಇದೆ. ನಾನು ನನ್ನ ವಿಚಾರಗಳನ್ನು ಯಾರ ಗಂಟಲಿನಲ್ಲೂ ತುರುಕಿಲ್ಲ" ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರವಾದಿ ಮೊಹಮದ್ ನ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಶನಿವಾರ ರಾತ್ರಿ ವಿ ಎಚ್ ಪಿ ಕೃಪಾಪೋಷಿತ 'ಘರ್ ವಾಪಸಿ' ಎಂಬ ಮರು ಮತಾಂತರ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಹೈದರಾಬಾದ್ ನಿಂದ ಆಯ್ಕೆಗೊಂಡಿರುವ ಈ ಲೋಕಸಭಾ ಸದಸ್ಯ ಈ ರೀತಿಯ ವಿವಾದಾತ್ಮಕ ಹೇಳಿಗೆಗಳನ್ನು ನೀಡಿದ್ದರು.

SCROLL FOR NEXT