ಸುಬ್ರಮಣಿಯನ್ ಸ್ವಾಮಿ 
ಪ್ರಧಾನ ಸುದ್ದಿ

ಶಶಿ ತರೂರ್ ಸುಳ್ಳು ಹೇಳ್ತಿದ್ದಾರೆ: ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್ ನೇತಾರ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರದ್ದು ಸಹಜ ಸಾವು ಅಲ್ಲ, ಅದೊಂದು ಕೊಲೆ ಎಂದು...

ನವದೆಹಲಿ:  ಕಾಂಗ್ರೆಸ್ ನೇತಾರ ಶಶಿ ತರೂರ್ ಅವರ ಪತ್ನಿ  ಸುನಂದಾ ಪುಷ್ಕರ್ ಅವರದ್ದು ಸಹಜ ಸಾವು ಅಲ್ಲ, ಅದೊಂದು ಕೊಲೆ ಎಂದು ದೆಹಲಿ ಪೊಲೀಸರು ಹೇಳಿದ್ದು, ಇದಕ್ಕೆ ಬಿಜೆಪಿ ಹಿರಿಯ ನೇತಾರ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುನಂದಾ ಅವರಿಗೆ ಸತ್ಯ ಗೊತ್ತಿತ್ತು. ಅದನ್ನು ಅವರು ಬಹಿರಂಗಪಡಿಸಲು ಇಚ್ಛಿಸಿದ್ದರು. ಇಲ್ಲಿ ಶಶಿ ತರೂರ್ ಸುಳ್ಳು ಹೇಳುತ್ತಿದ್ದು, ಸತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ಸುನಂದಾ ಸಾವು ಪ್ರಕರಣದಲ್ಲಿ ದೆಹಲಿ ಪೊಲೀಸರು ಐಪಿಸಿ 302 ಪರಿಚ್ಛೇದದಡಿಯಲ್ಲಿ ಕೇಸು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ಪೊಲೀಸರ ನಡೆ ಬಗ್ಗೆ ನನಗೆ ಸಂತಸವಿದೆ, ಇದೊಂದು ಕೊಲೆ, ಹಣ ತೆಗೆದುಕೊಂಡು ಮಾಡಿರುವ ಕೊಲೆ ಎಂದಿದ್ದಾರೆ.

2014 ಜನವರಿ 17 ರಂದು ಸುನಂದಾ ಐಶಾರಾವಿ ಹೋಟೆಲ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಸುನಂದಾ ಸಾವಿನ ಐದೇ ವಾರಗಳಲ್ಲಿ ಸ್ವಾಮಿ, ಇದೊಂದು ಕೊಲೆ, ಪಳಗಿದ ವ್ಯಕ್ತಿಯೊಬ್ಬರಿಂದಲೇ ಈ ರೀತಿಯ ಹತ್ಯೆಗೆಯ್ಯಲು ಸಾಧ್ಯ ಎಂದು ಹೇಳಿದ್ದರು.

ಸುನಂದಾ ಸಾವು ಪ್ರಕರಣದ ತನಿಖೆ ನಡೆಸುವ ವೇಳೆ ಸುಬ್ರಮಣಿಯನ್ ಸ್ವಾಮಿ ಶಶಿ ತರೂರ್ ಅವರ ಪತ್ನಿಗೆ ರಷ್ಯನ್ ವಿಷ (ಪೊಲೋನಿಯಂ) ಉಣಿಸಿ ಹತ್ಯೆಗೈಯ್ಯಲಾಗಿದೆ ಎಂದು ಹೇಳಿದ್ದರು.

ಪ್ರಸ್ತುತ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ವಾಮಿ ಪತ್ರ ಬರೆದಿದ್ದರು. ಆದಾಗ್ಯೂ, ಐಪಿಎಲ್ ಅವ್ಯವಹಾರಕ್ಕೆ ಸಂಬಂಧಿಸಿಯೇ ಸುನಂದಾ ಕೊಲೆ ನಡೆದಿದೆ ಎಂದು ಸ್ವಾಮಿ ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!