ಸಾಮಾಜಿಕ ತಾಣದಲ್ಲಿ ಮಲಿಯಾ ಒಬಾಮ ಫೋಟೋ
ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ಪುತ್ರಿ, 16ರ ಹರೆಯದ ಮಲಿಯಾ ಒಬಾಮಳ ಅನಧಿಕೃತ ಫೋಟೋವೊಂದು ಲೀಕ್ ಆಗಿದ್ದು, ಸಾಮಾಜಿಕ ತಾಣದಲ್ಲಿ ಇದು ಸಂಚಲನ ಸೃಷ್ಟಿಸಿದೆ.
ಮಲಿಯಾ ನ್ಯೂಯಾರ್ಕ್‌ನ ಹಿಪ್ ಹಾಪ್ ಮ್ಯೂಸಿಕ್ ಬ್ಯಾಂಡ್ ಪ್ರೊ ಇರಾ ಎಂದು ಬರೆದಿರುವ ಟೀ ಶರ್ಟ್ ಧರಿಸಿ ಪೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ತನ್ನ ಕೂದಲನ್ನು ಎರಡೂ ಕೈಗಳಿಂದ ಸರಿಮಾಡುತ್ತಿರುವ ಫೋಟೋ ಇದಾಗಿದೆ. ಮಾಲಿಯಾಳ ಈ ಫೋಟೋವನ್ನು ಆಕೆಯ ತಂಗಿ 13ರ ಹರೆಯದ ಸಾಶಾ ತೆಗೆದಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಒಬಾಮಾ ಅಥವಾ ಅವರ ಪತ್ನಿ ಮಿಶೆಲ್ ಒಬಾಮಾ ಅವರ ಅನುಪಸ್ಥಿತಿಯಲ್ಲಿ ಈ ಫೋಟೋವನ್ನು ಮಲಿಯಾ ಅಥವಾ ಆಕೆಯ ತಂಗಿ ಸಾಮಾಜಿಕ ತಾಣದಲ್ಲಿ ಹಾಕಿಲ್ಲ ಎಂದು ವೈಟ್ ಹೌಸ್‌ನ ಮೂಲಗಳು ಹೇಳಿವೆ.
ಈ ಫೋಟೋ ಅನಧಿಕೃತವಾಗಿದೆ ಎಂದು ವೈಟ್ ಹೌಸ್ ಪ್ರತಿಕ್ರಿಯಿಸಿದ್ದು, ಇಂಥಾ ಕೃತ್ಯಗಳ ಬಗ್ಗೆ ಅಸಮಧಾನ ಸೂಚಿಸಿದೆ.
ಆದಾಗ್ಯೂ, ಪ್ರಸ್ತುತ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಪ್ರೊ ಇರಾ ಬ್ಯಾಂಡ್‌ನ ವಕ್ತಾರ ಬ್ರಾಡ್ಲಿ ಬ್ಲೆಡ್ಸೋ, ಪ್ರೊ ಇರಾ ಮತ್ತು ಮಲಿಯಾಳ ಮ್ಯೂಚ್ವಲ್ ಫ್ರೆಂಡ್ ನಿಂದ ನಮ್ಮ ಗ್ರೂಪ್ ಗೆ ಈ ಫೋಟೋ ಸಿಕ್ಕಿದೆ. ಮಾಲೀಯಾಳ ಫೋಟೋ ನಕಲಿ ಅಲ್ಲ ಸಾಚಾ ಎಂದು ಹೇಳಿದ್ದಾರೆ. ಅದೇ ವೇಳೆ ಪ್ರೊ ಇರಾ ದಿಂದ ಯಾರೊಬ್ಬರೂ ವೈಟ್ ಹೌಸ್ ನ್ನು ಸಂಪರ್ಕಿಸಿಲ್ಲ ಎಂದು ಬ್ಲೆಡ್ಸೋ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics