ಏರ್ ಏಷ್ಯಾ ವಿಮಾನದ ಭಾಗ 
ಪ್ರಧಾನ ಸುದ್ದಿ

ಏರ್‌ಏಷ್ಯಾ ವಿಮಾನದ ಬ್ಲಾಕ್‌ಬಾಕ್ಸ್ ನಿಂದ ಸಿಗ್ನಲ್ ಪತ್ತೆ

ಏರ್ ಏಷ್ಯಾ ವಿಮಾನ ದುರಂತ ಸಂಭವಿಸಿದ ಜಾವಾ ಸಮುದ್ರದಲ್ಲಿ ಪ್ರಸ್ತುತ ವಿಮಾನದ ಬ್ಲಾಕ್ ಬಾಕ್ಸ್‌ನಿಂದ ಸಿಗ್ನಲ್‌ಗಳು...

ಜಕಾರ್ತಾ: ಏರ್ ಏಷ್ಯಾ ವಿಮಾನ ದುರಂತ ಸಂಭವಿಸಿದ ಜಾವಾ ಸಮುದ್ರದಲ್ಲಿ ಪ್ರಸ್ತುತ ವಿಮಾನದ ಬ್ಲಾಕ್ ಬಾಕ್ಸ್‌ನಿಂದ ಸಿಗ್ನಲ್‌ಗಳು ಪತ್ತೆಯಾಗಿವೆ ಎಂದು ಇಂಡೋನೇಷ್ಯಾ ಮಿಲಿಟರಿ ಕಮಾಂಡರ್ ಜನರಲ್ ಮೊಯ್ಲೆಡೋಕೋ ಶುಕ್ರವಾರ ಹೇಳಿದ್ದಾರೆ.
ಆರಂಭಿಕ ಸ್ಥಾನದಿಂದ ಸುಮಾರು 300 ಕಿಮೀ ದೂರದಿಂದ ಈ ಸಿಗ್ನಲ್‌ಗಳು ಪತ್ತೆಯಾಗಿವೆ ಎಂದು ಮೊಯ್ಲೆಡೋಕೋ ಹೇಳಿರುವುದನ್ನು ಸುದ್ದಿಪತ್ರಿಕೆಯೊಂದು ಉಲ್ಲೇಖಿಸಿದೆ.
ಇಂಡೋನೇಷ್ಯಾದ  ಸೆಂಟ್ರಲ್ ಕಲಿಮನ್‌ಟಂನ್ ಕರಾವಳಿಯಲ್ಲಿ ದುರಂತಕ್ಕೊಳಗಾದ ಏರ್ ಬಸ್ ಎ320-200ರ ಬಾಲ ಬುಧವಾರ ಪತ್ತೆಯಾಗಿತ್ತು.
ಬ್ಲಾಕ್‌ಬಾಕ್ಸ್‌ನಿಂದ ಸಿಗ್ನಲ್‌ಗಳು ಪತ್ತೆಯಾಗಿರುವುದರಿಂದ ಬ್ಲಾಕ್ ಬಾಕ್ಸ್ ಎಲ್ಲಿದೆ ಎಂದು ಪತ್ತೆ ಹಚ್ಚಲು 7 ಮುಳುಗುತಜ್ಞರನ್ನು ನೇಮಿಸಲಾಗಿದೆ ಎಂದು ಮೊಯ್ಲೆಡೋಕೋ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT