'ಮರ್ದ್' ಅಭಿಯಾನಕ್ಕೆ ವಿದೇಶಿ ಕಲಾವಿದರಿಂದಲೂ ಬೆಂಬಲ
ಬಾಲಿವುಡ್ ನಟ, ಗಾಯಕ ಫರ್ಹಾನ್ ಅಖ್ತರ್ ಅವರ ಮರ್ದ್ (MARD) ಅಭಿಯಾನಕ್ಕೆ ಹಾಲಿವುಡ್ ಸೇರಿದಂತೆ ವಿದೇಶಿ...
ಮುಂಬೈ: ಬಾಲಿವುಡ್ ನಟ, ಗಾಯಕ ಫರ್ಹಾನ್ ಅಖ್ತರ್ ಅವರ ಮರ್ದ್ (MARD) ಅಭಿಯಾನಕ್ಕೆ ಹಾಲಿವುಡ್ ಸೇರಿದಂತೆ ವಿದೇಶಿ ಕಲಾವಿದರಿಂದಲೂ ಬೆಂಬಲ ಸಿಗುತ್ತಿದೆ.
ಮರ್ದ್ ಅಭಿಯಾನಕ್ಕೆ ಎಮ್ಮಾ ವಾಟ್ಸನ್ ಮತ್ತು ಮೈಕೆಲ್ ಬಾಲ್ಟನ್ ಅವರಿಂದ ಬೆಂಬಲ ಸಿಕ್ಕಿದ ನಂತರ ಇದೀಗ ಪಾಕಿಸ್ತಾನದ ಶಾಸ್ತ್ರೀಯ ಸಂಗೀತಗಾರ ಶಫ್ಕತ್ ಅಮನತ್ ಅಲಿ ಅವರಿಂದಲೂ ಬೆಂಬಲ ಸಿಕ್ಕಿದೆ.
ಸಮಾಜದಲ್ಲಿ ಲಿಂಗ ಸಮಾನತೆಗಾಗಿ ಹೋರಾಡುವ ಸಲುವಾಗಿ ಮರ್ದ್ ಅಭಿಯಾನವನ್ನು ಫರ್ಹಾನ್ ಆರಂಭಿಸಿದ್ದರು. ಫರ್ಹಾನ್ರ ಈ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಈಗಾಗಲೇ ಸಿಲೆಬ್ರಿಟಿಗಳಾದ ಸಚಿನ್ ತೆಂಡೂಲ್ಕರ್, ಮಹೇಶ್ ಬಾಬು , ಶಾನ್, ಯುವರಾಜ್ ಸಿಂಗ್ ಮೊದಲಾದವರು ಮರ್ದ್ಗೆ ಬೆಂಬಲ ನೀಡಿದ್ದು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿ ಪ್ರಸಾರವಾಗುವ ಮರ್ದ್ ಅಭಿಯಾನದ ಹಾಡಿಗೂ ದನಿಗೂಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.