ಚೆನ್ನೈ ಪುಸ್ತಕ ಮೇಳದಲ್ಲಿ ಪೆರುಮಾಳ್ ಮುರುಗನ್ ಪರವಾಗಿ ಪ್ರತಿಭಟನೆ ನಡೆಸಿದ ತಂಡ 
ಪ್ರಧಾನ ಸುದ್ದಿ

ಪೆರುಮಾಳ್ ಮುರುಗನ್ ಸತ್ತಿದ್ದಾನೆ, ನಾನು ಪೆ ಮುರುಗನ್ ಇನ್ನೆಂದೂ ಬರೆಯುವುದಿಲ್ಲ

ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಕಾದಂಬರಿ 'ಮಾಧುರ್ ಬಾಹನ್' ...

ಚೆನ್ನೈ: ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಕಾದಂಬರಿ 'ಮಾಧುರ್ ಬಾಹನ್' (ಅರ್ಧ ನಾರೀಶ್ವರ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಸಂಘಟನೆಗಳ ಬೆದರಿಕೆಗೆ ಲೇಖಕ ಹಿಮ್ಮೆಟ್ಟಿದ್ದಾರೆಯೇ?

ತಮ್ಮ ಫೇಸ್ ಬುಕ್ ಪುಟದಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ "ಆತ್ಮೀಯ ಗೆಳೆಯರೆ, ನಾನು ಈಗ ಬರೆಯುತ್ತಿರುವ ಸಂದೇಶ ಇನ್ನೆರಡು ದಿನ ಉಳಿದಿರುತ್ತದೆ. ನಂತರ ನಾನು ಎಲ್ಲ ಸಾಮಾಜಿಕ ಜಾಲತಾಣಗಳಿಂದ ಹೊರಬೀಳುತ್ತೇನೆ.

"ಬರಹಗಾರ ಪೆರುಮಾಳ್ ಮುರುಗನ್ ಸತ್ತಿದ್ದಾನೆ. ಅವನು ದೇವರಲ್ಲ ಹಾಗೂ ಅವನಿಗೆ ಮರುಹುಟ್ಟಿನಲ್ಲೂ ನಂಬಿಕೆಯಿಲ್ಲ. ಇನ್ನು ಮುಂದೆ ಅವನು ಪೆ ಮುರುಗನ್ ಆಗಿ ಬದುಕಲಿದ್ದಾನೆ. ಒಬ್ಬ ಸಾಮಾನ್ಯ ಶಿಕ್ಷಕನಾಗಿ ಇರಲಿದ್ದಾನೆ.

"ಮಾಧುರ್ ಬಾಹನ್ ನಿಂದ ಈ ತೊಂದರೆ ನಿವಾರಣೆಯಾಗುವುದಿಲ್ಲ. ವಿವಿಧ ಸಂಘಟನೆಗಳು ಮತ್ತು ಇತರರು ಅವನ ಉಳಿದ ಕಾದಂಬರಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಸೃಷ್ಟಿಸುತ್ತಿರುತ್ತಾರೆ. ಅದಕ್ಕೆ ಅವನು ಈ ಕೆಳಕಂಡ ನಿರ್ಧಾರಗಳನ್ನು ಕೈಗೊಂಡಿರುತ್ತಾನೆ.

"ಎಲ್ಲ ಪೆರುಮಾಳ್ ಮುರುಗನ್ ನ ಕಾದಂಬರಿಗಳು, ಸಣ್ಣ ಕಥೆಗಳು, ಪ್ರಬಂಧಗಳು ಮತ್ತು ಕವನಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾನೆ ಹಾಗು ಅವುಗಳನ್ನು ಮಾರಾಟ ಮಾಡುವುದಿಲ್ಲ.

"ಪ್ರಕಾಶಕರಾದ ಕಳಚುವಡು, ನಾತ್ರಿನೈ, ಅಡಯಾಳಮ್, ಮಲೈಗಲ್ ಮತ್ತು ಕಯಾಲ್ಕಾವಿನ್ ಸಂಸ್ಥೆಗಳಿಗೆ ಪೆರುಮಾಳ್ ಮುರುಗನ್ ನ ಯಾವುದೇ ಪುಸ್ತಕಗಳನ್ನು ಮಾರಾಟ ಮಾಡದಂತೆ ನಾನು ವಿನಂತಿಸಿಕೊಳ್ಳುತ್ತೇನೆ. ಪೆ ಮುರುಗನ್ ಇದಕ್ಕೆ ತಗುಲಿದ ವೆಚ್ಚವನ್ನು ಭರಿಸಿಕೊಡಲಿದ್ದಾನೆ.

"ಪೆರುಮಾಳ್ ಮುರುಗನ್ ಪುಸ್ತಕಗಳನ್ನು ಕೊಂಡವರೆಲ್ಲಾ ಅವುಗಳನ್ನು ಸುಟ್ಟು ಹಾಕಬಹುದು. ಈ ಖರೀದಿಯ ಖರ್ಚನ್ನೂ ಪೆ ಮುರುಗನ್ ಭರಿಸಿಕೊಡುತ್ತಾನೆ.

"ಪೆರುಮಾಳ್ ಮುರುಗನ್ ಇನ್ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಅವನನ್ನು ಆಹ್ವಾನಿಸಬೇಡಿ.

"ಎಲ್ಲ ಜಾತಿ, ಧರ್ಮ ಪಂಗಡಗಳು ಮತ್ತು ರಾಜಕೀಯ ಪಕ್ಷಗಳಿಗೆ ನನ್ನ ವಿನಂತಿಯೇನೆಂದರೆ, ಎಲ್ಲ ಪುಸ್ತಕಗಳನ್ನು ನಾನು ಹಿಂದೆಗೆದುಕೊಂಡಿರುವುದರಿಂದ ದಯವಿಟ್ಟು ಯಾವುದೇ ಪ್ರತಿಭಟನೆ ಬೇಡ. ಯಾವುದೇ ತೊಂದರೆ ಸೃಷ್ಟಿಸಬೇಡಿ. ಪೆರುಮಾಳ್ ಮುರುಗನ್ ನನ್ನು ಬಿಟ್ಟುಬಿಡಿ"

ಕೆಲವು ಹಿಂದೂ ಸಂಘಟನೆಗಳು ಪೆರುಮಾಳ್ ಮುರುಗನ್ ಅವರ ಪುಸ್ತಕ ಮಾಧುರ್ ಬಾಹನ್ ನಿಷೇಧಿಸಿ ಲೇಖಕರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರಗತಿಪರ ಬರಹಗಾರು ಮತ್ತು ವಿವಿಧ ಸಂಘಟನೆಗಳಿಂದ ತೀವ್ರ ಪ್ರತಿರೋಧ ಉಂಟಾಗಿತ್ತು ಹಾಗೂ ಅವರೆಲ್ಲಾ ಪೆರುಮಾಳ್ ಮುರುಗನ್ ಅವರ ಜೊತೆ ನಿಲ್ಲುವುದಾಗಿ ತಿಳಿಸಿದ್ದರು. ಹೀಗಿದ್ದೂ ಪೆರುಮಾಳ್ ಮುರಗನ್ ಅವರು ಹಿಮ್ಮೆಟ್ಟಿರುವುದು ಏಕೆ ಎಂಬ ಪ್ರಶ್ನೆ ಈಗ ಉಳಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT