ಸಿಸಿಟಿವಿ ದೃಶ್ಯಾವಳಿ 
ಪ್ರಧಾನ ಸುದ್ದಿ

ಮಹಿಳಾ ಕ್ರೀಡಾಪಟು ಜತೆ ಕೋಚ್ 'ಚೆಲ್ಲಾಟ'? ; ಸಿಸಿಟಿವಿಯಲ್ಲಿ ಸೆರೆ

ಆಂಧ್ರಪ್ರದೇಶದಲ್ಲಿ ಟೇಬಲ್ ಟೆನ್ನಿಸ್ ಕೋಚ್ ಮಹಿಳಾ ಕ್ರೀಡಾಪಟುವಿನ ಜತೆ ಹೋಟೆಲ್ ರೂಂನ ಹೊರಗೆ ಮೈ ಮುಟ್ಟಿ ಎಳೆದಾಡುತ್ತಿರುವ...

ನವದೆಹಲಿ: ಆಂಧ್ರಪ್ರದೇಶದಲ್ಲಿ ಟೇಬಲ್ ಟೆನ್ನಿಸ್ ಕೋಚ್ ಮಹಿಳಾ ಕ್ರೀಡಾಪಟುವಿನ ಜತೆ ಹೋಟೆಲ್ ರೂಂನ ಹೊರಗೆ ಮೈ ಮುಟ್ಟಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ಕೋಚ್‌ನ ರೂಂನಿಂದ ಇನ್ನು ಕೆಲವು ಹುಡುಗಿಯರು ಹೊರಗೆ ಬರುತ್ತಿರುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ವಿವಾದ ಸೃಷ್ಟಿಸಿವೆ.

ಆಂಧ್ರಪ್ರದೇಶದಲ್ಲಿ ನಡೆದ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಗಮಿಸಿದ ಚತ್ತೀಸ್‌ಗಢದ ಜ್ಯೂನಿಯರ್ ಟೀಂನ ಸದಸ್ಯೆ ಮತ್ತು ಕೋಚ್ ಈ ರೀತಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸುದ್ದಿಯಾಗಿದೆ.

ಡಿಸೆಂಬರ್ 26ರಂದು ರೆಕಾರ್ಡ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳಾ ಕ್ರೀಡಾಪಟುವನ್ನು 19ರ ಹರೆಯದ ಕೋಚ್ ಆಕೆಯ ರೂಮಿನಿಂದ ಎಳೆಯುತ್ತಿರುವುದು ಕಾಣಿಸುತ್ತಿದ್ದೆ. ಆ ಮಹಿಳಾ ಕ್ರೀಡಾಪಟು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೂ ಕಾಣಿಸಿಕೊಂಡಿದ್ದು, ಹೋಟೆಲ್ ರೂಂ ಹೊರಗೆ ಏನು ಸಂಭವಿಸಿತು ಎಂಬ ಸತ್ಯಾಸತ್ಯತೆ
ಇನ್ನೂ ತಿಳಿದು ಬಂದಿಲ್ಲ.

ಪ್ರಸ್ತುತ ಸಿಸಿಟಿವಿ ದೃಶ್ಯದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರ ಚತ್ತೀಸ್‌ಗಢ್ ರಾಜ್ಯ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಆ ಕೋಚ್ ಮತ್ತು ಕ್ರೀಡಾಪಟುವನ್ನು ವಜಾಗೊಳಿಸಿದೆ. ಆದರೆ ವಜಾಗೊಳಿಸಲು ಕಾರಣ ಏನು ಎಂಬುದನ್ನು ನೀಡಿಲ್ಲ.

ಸಿಸಿಟಿವಿ ದೃಶ್ಯ ವಿವಾದ ಸೃಷ್ಟಿಸಿದ ಕೂಡಲೇ ಅಸೋಸಿಯೇಷನ್‌ನ  ಪ್ರಧಾನ ಕಾರ್ಯದರ್ಶಿ ಅಮಿತಾಬ್ ಶುಕ್ಲಾ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ.

ಕೋಚ್ ಮತ್ತು ಕ್ರೀಡಾಪಟು ಮೊಬೈಲ್ ಫೋನ್‌ಗಾಗಿ ಜಗಳವಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಫೋನ್‌ಗಾಗಿ ನಡೆದ ಜಗಳ ಅಷ್ಟೇ ಬೇರೇನೂ ಇಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಶರದ್ ಶುಕ್ಲಾ ಹೇಳಿದ್ದಾರೆ.

ಟೆನಿಸ್ ಟೇಬಲ್ ಹುಡುಗಿಯರ ತಂಡಕ್ಕೆ 19ರ ಹರೆಯದ ವ್ಯಕ್ತಿಯನ್ನು ಕೋಚ್‌ನ್ನಾಗಿ ನೇಮಿಸಿರುವುದರ ಬಗ್ಗೆಯೂ ಈ ಹಿಂದೆ ವಿವಾದಗಳೆದ್ದಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!